Advertisement

ನ್ಯಾಪ್‌ಕಿನ್‌ ಮೇಲಿನ ಸುಂಕ ರದ್ದತಿಗೆ ಮುಂದಾದ ಶುನಾಕ್‌

11:07 AM Mar 08, 2020 | sudhir |

ನವದೆಹಲಿ: ಬ್ರಿಟನ್‌ನ ಸಂಸತ್ತಿನಲ್ಲಿ ಮಾ. 11ರಂದು ತಮ್ಮ ಚೊಚ್ಚಲ ಬಜೆಟ್‌ ಮಂಡಿಸಲಿರುವ, ಇನ್ಫಿ ಮೂರ್ತಿ ಅಳಿಯ ರಿಷಿ ಶುನಾಕ್‌, ಯು.ಕೆ.ಯಲ್ಲಿ ಸ್ಯಾನಿಟರಿ ಸಾಮಗ್ರಿಗಳ ಮೇಲೆ ವಿಧಿಸಲಾಗುವ ಶೇ.5ರಷ್ಟು ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಇರಾದೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದಿದ್ದ ಬ್ರಿಟನ್‌ ಮಹಾ ಚುನಾವಣೆ ಸಂದರ್ಭದಲ್ಲಿ, ಪ್ರಧಾನಿ ಬೋರಿಸ್‌ ಜಾನ್ಸನ್‌ ನೀಡಿದ್ದ ಈ ಆಶ್ವಾಸನೆಯನ್ನು ಈಗ ಈಡೇರಿಸಲಾಗುತ್ತಿದೆ ಎಂದು ಹೇಳಲಾಗಿದೆ.

Advertisement

“ಟ್ಯಾಪ್ಟನ್‌ ಟ್ಯಾಕ್ಸ್‌’ ಎಂದು ಕರೆಯಲ್ಪಡುವ ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲಿನ ತೆರಿಗೆ ಮನ್ನಾ ಕೂಗು ಹಳೆಯದ್ದು. ಆದರೆ, ಯು.ಕೆ. ಐರೋಪ್ಯ ಒಕ್ಕೂಟದಲ್ಲಿ ಇದ್ದಿದ್ದರಿಂದ ತೆರಿಗೆ ಮನ್ನಾ ಸಾಧ್ಯವಾಗಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಯು.ಕೆ. ಐರೋಪ್ಯ ಒಕ್ಕೂಟದಿಂದ ಹೊರಬಂದಿದೆ. ಹಾಗಾಗಿ, ಮಹಿಳೆಯರ ಬಹುದಿನಗಳ ಬೇಡಿಕೆ ಈಗ ಜಾರಿಗೊಳ್ಳುವ ಸಾಧ್ಯತೆಯಿದೆ ಎಂದು ಯು.ಕೆ. ಮಾಧ್ಯಮಗಳು ವರದಿ ಮಾಡಿವೆ. ತೆರಿಗೆ ಮನ್ನಾ ಆದರೆ, ಅದರ ಲಾಭ 2021ರ ಜನವರಿಯಿಂದ ಜನರಿಗೆ ದೊರಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next