Advertisement

ರವಿ ಮೂಡಿದ

06:00 AM May 04, 2018 | Team Udayavani |

ಒಂದು ಪಾತ್ರವನ್ನೇ ತೂಗಿಸಿಕೊಂಡು ಹೋಗಲು ಕಷ್ಟಪಡುವ ಸಾಕಷ್ಟು ನಟ-ನಟಿಯರಿದ್ದಾರೆ. ಹೀಗಿರುವಾಗ ದ್ವಿಪಾತ್ರ ಸಿಕ್ಕರೆ ನಿಭಾಹಿಸೋದು ಸುಲಭನಾ? ಆದರೆ, ಒಬ್ಬ ಯುವ ನಟ ಮಾತ್ರ ತಾನು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದು ಮೊದಲ ಚಿತ್ರದಲ್ಲೇ ಎಂಬುದು ಗಮನಾರ್ಹ ಅಂಶ. ಹೀಗೆ ಮೊದಲ ಚಿತ್ರದಲ್ಲೇ ತಮ್ಮ ನಟನೆಯ ಮೂಲಕ ಭರವಸೆ ಮೂಡಿಸಿರುವ ನಟ ರವಿ. ಯಾವ ರವಿ ಎಂದು ನೀವು ಕೇಳಿದರೆ “ಧ್ವಜ’ ಚಿತ್ರದ ಬಗ್ಗೆ ಹೇಳಬೇಕು. ಕಳೆದ ವಾರ ತೆರೆಕಂಡ “ಧ್ವಜ’ ಚಿತ್ರದಲ್ಲಿ ನಾಯಕರಾಗಿ ನಟಿಸಿದವರು ರವಿ. ಸಿನಿಮಾ ನೋಡಿದವರಿಂದ ರವಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Advertisement

ರವಿ ತಮ್ಮ ಮೊದಲ ಚಿತ್ರದಲ್ಲೇ ದ್ವಿಪಾತ್ರ ಮಾಡಿದ್ದಾರೆ. ಒಂದು ಪಾತ್ರದಲ್ಲಿ ತುಂಬಾ ಮುಗ್ಧ ಹುಡುಗನಾದರೆ ಮತ್ತೂಂದರಲ್ಲಿ ಸಖತ್‌ ರಗಡ್‌ ಆಗಿ ನಟಿಸಿದ್ದಾರೆ. ಎರಡು ಪಾತ್ರದಲ್ಲಿ ಅವರ ಗೆಟಪ್‌ ಕೂಡಾ ವಿಭಿನ್ನವಾಗಿದೆ. ಅಂದಹಾಗೆ, “ಧ್ವಜ’ ಚಿತ್ರ ತಮಿಳಿನ “ಕೊಡಿ’ ಚಿತ್ರದ ರೀಮೇಕ್‌. ಅಲ್ಲಿ ಧನುಶ್‌ ಮಾಡಿದ ಪಾತ್ರವನ್ನು ಇಲ್ಲಿ ರವಿ ಮಾಡಿದ್ದಾರೆ. ಧನುಶ್‌ ಈ ಸಿನಿಮಾ ಮಾಡುವ ಹೊತ್ತಿಗೆ 30ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ ಅನುಭವಿತ್ತು. ಆದರೆ, ರವಿಯವರಿಗೆ “ಧ್ವಜ’ ಮೊದಲ ಸಿನಿಮಾ.

ರವಿಗೆ ಇಂಥದ್ದೊಂದು ಚಿತ್ರ ಆಗುತ್ತೆ ಎಂಬ ನಂಬಿಕೆಯೇ ಇರಲಿಲ್ಲವಂತೆ. “ನಿಜಕ್ಕೂ ನನಗೆ ಈ ಸಿನಿಮಾ ಆಗಬಹುದು ಎಂಬ ನಂಬಿಕೆ ಇರಲಿಲ್ಲ. ಯಾವುದೋ ವಿಷಯ ಎಲ್ಲರನ್ನೂ ಒಟ್ಟಿಗೆ ಸೇರಿಸಿ, ಚಿತ್ರ ಮಾಡಿಸಿತು. ಈ ಚಿತ್ರ ಹೇಗೆ ಬರುತ್ತದೆ ಎಂದೇ ಗೊತ್ತಿರಲಿಲ್ಲ. ನಾನು ಹೊಸಬನಾದರೂ ಅಶೋಕ್‌ ಕಶ್ಯಪ್‌, ಪ್ರಿಯಾಮಣಿಯಂತಹ ಸೀನಿಯರ್‌ಗಳು ಜೊತೆಯಾದರು’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ರವಿ. 

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next