Advertisement

ರಣ ಬಿಸಿಲಿಗೆ ಬಿಕೋ ಎನ್ನುತ್ತಿವೆ ರಸ್ತೆಗಳು

12:56 PM Apr 09, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಮಾರ್ಚ್‌ ಕೊನೆ ವಾರದಿಂದ ಪ್ರಾರಂಭವಾದ ಸೂರ್ಯನ ಬಿಸಿಲಿನ ಧಗೆ ಮತ್ತು ರಣಬಿಸಿಲು, ಬಿಸಿ ಗಾಳಿ ಬೀಸುತ್ತಿರುವುದರಿಂದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.

Advertisement

ತಾಲೂಕಿನಲ್ಲಿ ಹೆಚ್ಚಿನ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಬಿಸಿ ಜಳ ಹೆಚ್ಚುತ್ತಿದೆ. ತಂಪು ನೀರು, ಎಳೆ ನೀರು, ಜ್ಯೂಸ್‌, ಕಲ್ಲಂಗಡಿ, ಮಜ್ಜಿಗೆ, ಲಸ್ಸಿ, ಕೆಂಪು ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ.

ರಣ ಬಿಸಿಲಿನಿಂದಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಬಟ್ಟೆ ಅಂಗಡಿ, ಬಳೆ ಅಂಗಡಿ, ಕಿರಾಣಿ, ಚಹಾ ಅಂಗಡಿ, ಖಾನಾವಳಿ, ಬಸ್‌ ನಿಲ್ದಾಣಗಳಲ್ಲಿ ಕೆಲವೇ ಜನರು ಕಾಣುತ್ತಿದ್ದಾರೆ.

ಸುಲೇಪೇಟ, ಕೊಡ್ಲಿ, ಚಂದನಕೇರಾ, ಕುಂಚಾ ವರಂ, ಚಿಮ್ಮನಚೋಡ, ಮಿರಿಯಾಣ, ಗಡಿಕೇಶ್ವಾರ, ಮೋಘಾ, ಗಡಿಲಿಂಗದಳ್ಳಿ, ಐನಾಪುರ, ವೆಂಕಟಾಪುರ, ಹಸರಗುಂಡಗಿ, ಸಾಲೇಬೀರನಳ್ಳಿ, ಗಡಿಲಿಂಗದಳ್ಳಿ ಗ್ರಾಮಗಳಲ್ಲಿ ಮಧ್ಯಾಹ್ನ ಸಮಯದಲ್ಲಿ ಜನರು ರಸ್ತೆಯಲ್ಲಿ ತಿರುಗಾಡದೇ ಮನೆಯಲ್ಲೇ ಉಳಿಯುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ

Advertisement

ತಾಲೂಕಿನಲ್ಲೂ ಬೇಸಿಗೆ ಪ್ರಮಾಣ ಹೆಚ್ಚಿರುವುದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತಿದೆ. ಗಂಜಗಿರಿ, ಬೆನಕೆಪಳ್ಳಿ, ತಾಡಪಳ್ಳಿ, ಭುಯ್ನಾರ (ಕೆ), ಚೇಂಗಟಾ, ಗಡಿಲಿಂಗದಳ್ಳಿ, ಸಲಗರ ಕಾಲೋನಿ, ಪಾಲತ್ಯಾ ತಾಂಡಾ, ವಡತ್ಯಾ ತಾಂಡಾ, ಪೆದ್ದಾ ತಾಂಡಾ, ಮೋಘಾ, ರುಮ್ಮನಗೂಡ, ರುಸ್ತಂಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನೀರಿನ ಅಂರ್ತಜಲಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ಬೊರ್‌ವೆಲ್‌ ಗಳಲ್ಲಿ ಅಂರ್ತಜಲ ಕಡಿಮೆಯಾಗುತ್ತಿದೆ.ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ದನಕರುಗಳಿಗೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next