Advertisement

Summer; ರಾಜ್ಯದಲ್ಲೇ ಅತ್ಯಧಿಕ 44.5 ಡಿಗ್ರಿ ತಾಪಮಾನ ದಾಖಲು

05:48 PM Apr 05, 2024 | Team Udayavani |

ಕಲಬುರಗಿ: ಬಿಸಿಲು ನಾಡು ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಕಳೆದ ವಾರದಿಂದ ರಣ ಬಿಸಿಲು ಕೇಕೇ ಹಾಕುತ್ತಿದ್ದು, ಜನಜೀವನ ಮೇಲೆ ಪರಿಣಾಮ ಬೀರುತ್ತಿದೆ.‌ ಶುಕ್ರವಾರ ಆಳಂದ ತಾಲೂಕಿನ ಮಾದನಹಿಪ್ಪರಗಾ ಹೊಬಳಿಯ ನಿಂಬಾಳ -ಹಡಲಗಿಯಲ್ಲಿ ದಾಖಲೆಯ 44. 5 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ.‌

Advertisement

ಕಳೆದ ವಾರದಿಂದ 44 ಡ್ರಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ರಾಜ್ಯದಲ್ಲೇ ಇದು ಅತ್ಯಧಿಕ ತಾಪಮಾನ ಕಲಬುರಗಿಯದ್ದಾಗಿದೆ. ರಣ ರಣ ಬಿಸಿಲಿನಿಂದ ಜನ ಕಂಗೆಟ್ಟಿದ್ದು, ದಿನಚರಿಯೇ ಬದಲು ಮಾಡಿದೆ. ಮಧ್ಯಾಹ್ನ 12ರಿಂದ ಸಂಜೆ 6 ರವರೆಗೆ ಹೊರಗೆ ಬಾರದಂತೆ ಮಾಡಿದೆ.

ಜಿಲ್ಲೆಯ ಜೀವನದಿ ಭೀಮಾ ನದಿ ಸಂಪೂರ್ಣ ಬತ್ತಿರುವುದು ಉರಿ ಬಿಸಿಲಿಗೆ ತುಪ್ಪ ಸವರಿದಂತಾಗಿದೆ. ಬಿಸಿಲು ಹೀಗೆ ಮುಂದುವರೆದರೆ ಜನಜೀವನ ಅಸ್ತವ್ಯಸ್ತಗೊಳ್ಳುವ ಆತಂಕತೆ ಕಂಡು ಬರುತ್ತಿದೆ.ಪರಿಣಾಮಕಾರಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಜಿಲ್ಲಾಡಳಿತ ಜನತೆಗೆ ಕರೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next