Advertisement

ಸಮ್ಮರ್‌ ಸ್ಪೆಷಲ್‌ ಸಲಾಡ್ಸ್‌

06:00 AM Apr 27, 2018 | |

ಬಿರುಬಿಸಿಲಿಗೆ ದಣಿದ ದೇಹ ಸಲಾಡ್ಸ್‌ ಸೇವಿಸುವುದರಿಂದ ಹೊಸ ಚೈತನ್ಯವನ್ನು ಪಡೆಯಬಲ್ಲದು. ವಿವಿಧ ಹಣ್ಣುಗಳನ್ನು ತರಕಾರಿಗಳೊಡನೆ ಬೆರೆಸಿ ತಯಾರಿಸುವ ಸಲಾಡ್ಸ್‌ನ್ನು ಊಟದ ಜೊತೆ ಅಥವಾ ಚಪಾತಿ ಇನ್ನಿತರ ತಿಂಡಿಗಳ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಬಹಳ ಹಿತ.

Advertisement

ಕುಕುಂಬರ್‌ ವಿದ್‌ ಕಲ್ಲಂಗಡಿ ಸಲಾಡ್‌
ಬೇಕಾಗುವ ಸಾಮಗ್ರಿ: ಹೆಚ್ಚಿದ ಕಲ್ಲಂಗಡಿ- ಎಂಟು ಚಮಚ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ- ಆರು ಚಮಚ, ನೆನೆಸಿದ ಹೆಸರುಬೇಳೆ- ಎರಡು ಚಮಚ, ಹೆಚ್ಚಿದ ಸೀಡ್‌ಲೆಸ್‌ ಕಪ್ಪು ದ್ರಾಕ್ಷಿ- ಎರಡು ಚಮಚ, ನೆನೆಸಿದ ಶೇಂಗಾ- ಎರಡು ಚಮಚ, ಸ್ವೀಟ್‌ ಕಾರ್ನ್- ಎರಡು ಚಮಚ, ಬ್ಲೇಕ್‌ ಸಾಲ್ಟ್ – ರುಚಿಗೆ ಬೇಕಷ್ಟು,  ಪೆಪ್ಪರ್‌ ಅಥವಾ ಕೆಂಪು ಮೆಣಸಿನ ಪುಡಿ- ಕಾಲು ಚಮಚ ಬೇಕಿದ್ದರೆ.

ತಯಾರಿಸುವ ವಿಧಾನ: ಸರ್ವಿಂಗ್‌ ಬೌಲ್‌ಗೆ  ಕಲ್ಲಂಗಡಿ, ಸೌತೆಕಾಯಿ ಹಾಗೂ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಿಶ್ರಮಾಡಿ. ನಂತರ ಇದರ ಮೇಲೆ ಹೆಚ್ಚಿದ ಕಪ್ಪು$ದ್ರಾಕ್ಷಿಯನ್ನು ಹರಡಿ ಮೇಲಿನಿಂದ ಬ್ಲೇಕ್‌ ಸಾಲ್ಟ್ ಹಾಗೂ ಮೆಣಸಿನ ಪುಡಿಯನ್ನು ಚಿಮುಕಿಸಿ ಸರ್ವ್‌ ಮಾಡಬಹುದು.

ಬಿಟ್ರೂಟ್‌ ವಿದ್‌ ದಾಳಿಂಬೆ ಸಲಾಡ್‌ 
ಬೇಕಾಗುವ ಸಾಮಗ್ರಿ:
ಬಿಟ್ರೂಟ್‌ ತುರಿ- ನಾಲ್ಕು ಚಮಚ, ಕ್ಯಾರೆಟ್‌ತುರಿ- ಎಂಟು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ದಾಳಿಂಬೆ- ಆರು ಚಮಚ, ತೆಂಗಿನ ತುರಿ- ಎರಡು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಹೆಚ್ಚಿದ ಹಸಿಮೆಣಸು- ಒಂದು, ಸ್ವೀಟ್‌ಕಾರ್ನ್- ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ಒಂದು, ಲಿಂಬೆರಸ- ಎರಡು ಚಮಚ, ಬ್ಲೇಕ್‌ ಸಾಲ್ಟ್ – ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ಮೇಲಿನಿಂದ ಸೌತೆಕಾಯಿಯನ್ನು ಪೀಸ್‌ಗಳಿಂದ ಅಲಂಕರಿಸಿ ಸರ್ವ್‌ ಮಾಡಬಹುದು.

Advertisement

ಸೋರೆಕಾಯಿ ಸಲಾಡ್‌ 
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಎಳೆಸೋರೆಕಾಯಿ- ಆರು ಚಮಚ, ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ- ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ಎರಡು, ನೆನೆಸಿದ ಒಣದ್ರಾಕ್ಷಿ- ನಾಲ್ಕು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಮೊಳಕೆಕಟ್ಟಿದ ಹೆಸರುಕಾಳು- ಎರಡು ಚಮಚ, ತೆಂಗಿನ ತುರಿ- ನಾಲ್ಕು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಕರಿಬೇವು ಸೇರಿಸಿದ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಮೇಲಿನಿಂದ ಚೆರಿಯಿಂದ ಅಲಂಕರಿಸಬಹುದು.

ಖರ್ಬುಜ ವಿದ್‌ ಮಿಕ್ಸೆಡ್‌ ಫ‌ೂಟ್ಸ್‌  ಸಲಾಡ್‌ 
ಬೇಕಾಗುವ ಸಾಮಗ್ರಿ:
ಹೆಚ್ಚಿದ ಖಬೂಜ- ಎಂಟು ಚಮಚ, ದಾಳಿಂಬೆ- ನಾಲ್ಕು ಚಮಚ, ಬಾಳೆಹಣ್ಣು- ನಾಲ್ಕು ಚಮಚ, ಹೆಚ್ಚಿದ ದ್ರಾಕ್ಷಿ- ನಾಲ್ಕು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ಒಣದ್ರಾಕ್ಷಿ- ಎರಡು ಚಮಚ, ಖಜೂರ- ಎರಡು ಚಮಚ, ಜೇನುತುಪ್ಪ- ಒಂದು ಚಮಚ.  ಚಾಟ್‌ಪೌಡರ್‌ ಮತ್ತು ಪುದಿನ-ಒಂದು ಚಮಚ ಬೇಕಿದ್ದರೆ.  

ತಯಾರಿಸುವ ವಿಧಾನ: ಖರ್ಬುಜದ ಸಿಪ್ಪೆಯಲ್ಲಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಮಿಶ್ರಮಾಡಿ ಮೇಲಿನಿಂದ ಪುದಿನಾದಿಂದ ಅಲಂಕರಿಸಿ ಸರ್ವ್‌ ಮಾಡಬಹುದು. 

ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next