Advertisement
ಈ ಬಿಸಿಲಿನ ಸಮಸ್ಯೆಯಿಂದ ಅದೆಷ್ಟೋ ಪ್ರಾಣಿ ಪಕ್ಷಿಗಳು ಸಾಯುವ ಸ್ಥಿತಿಗೆ ಬಂದು ತಲುಪಿವೆ. ಬೀದಿ ಬದಿಯಲ್ಲಿರುವ ಪ್ರಾಣಿಗಳೆಲ್ಲಾ ನೀರಿಗಾಗಿ ಚರಂಡಿ ಬದಿಯಲ್ಲಿ ತನ್ನ ದಾಹವನ್ನು ತೀರಿಸುವಂತಾಗಿದೆ. ಈ ಬಿಸಿಲಿನಿಂದ ಕೆರೆ, ನದಿಗಳೆಲ್ಲಾ ಬತ್ತಿ ಹೋಗಿದೆ. ಬಿಸಿಲಿನ ತಾಪದಿಂದ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ನೋಡಬಹುದು.
Related Articles
Advertisement
ಬೇಸಗೆ ಸಮಯದಲ್ಲಿ ಮನೆಗಳ ಕಾಂಪೌಂಡ್, ರಸ್ತೆ ಬದಿ, ಟೆರೇಸ್‌ಗಳಲ್ಲಿ ನೀರು ಮತ್ತು ಆಹಾರವನ್ನು ಇಟ್ಟು, ಎರಡು ದಿನಗಳಿಗೊಮ್ಮೆ ಬದಲಾಯಿಸುತ್ತಿರಬೇಕು. ಮರದ ಕೆಳಗೆ ನೀರನ್ನು ಇಡುವುದರಿಂದ ಪಕ್ಷಿಗಳು ದಿನಾಲು ನೀರಿಗಾಗಿ ಬರುತ್ತವೆ.
ಅವುಗಳ ಜೀವವನ್ನು ಉಳಿಸಲು ಸಹಾಯಕವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ಇರುವ ಪ್ರಾಣಿ ಪಕ್ಷಿಗಳಿಗೆ ಸ್ವಲ್ಪ ನೀರು ಮತ್ತು ಆಹಾರವನ್ನು ಇಟ್ಟು ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು. ತಮ್ಮ ತಮ್ಮ ಮನೆಯ ಮುಂದೆ ಅಥವಾ ಅಂಗಡಿ ಮುಂದೆ ಒಂದು ಸಣ್ಣ ತೊಟ್ಟಿ ಮಾಡಿ ಅದರಲ್ಲಿ ನೀರನ್ನು ತುಂಬಿಸಿಡಬೇಕು. ಆಗ ಬೀದಿ ನಾಯಿಗಳು, ದನಗಳು, ಪಕ್ಷಿಗಳು ಎಲ್ಲ ನೀರಿಗಾಗಿ ಬರುತ್ತವೆ. ನಮ್ಮಿಂದಾಗುವ ಎಲ್ಲ ಸಹಾಯವನ್ನು ಮಾಡಿ ಕಂಗಾಲಾಗಿರುವ ಜೀವ ಸಂಕುಲಗಳನ್ನು ಸಂರಕ್ಷಿಸಬೇಕು.
-ಧನ್ಯಶ್ರೀ
ವಿವೇಕಾನಂದ ಸ್ವಾಯತ್ತ, ಕಾಲೇಜು ಪುತ್ತೂರು