Advertisement
ನಿಂಬೆರಸ ಹಾಗೂ ಜೇನುನಿಂಬೆರಸ ಹಾಗೂ ಜೇನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆಯಬೇಕು. ಸುಕೋಮಲ ಚರ್ಮ ಉಳ್ಳವರು ನಿಂಬೆರಸ, ಸೌತೆಕಾಯಿರಸ ಹಾಗೂ ಶುದ್ಧ ಗುಲಾಬಿ ಜಲ ಬೆರೆಸಿ ನಿತ್ಯ ಲೇಪಿಸಿದರೂ ಪರಿಣಾಮಕಾರಿ. ನಿಂಬೆರಸದಲ್ಲಿ ಸಿಟ್ರಿಕ್ ಆಮ್ಲದ ಅಂಶವಿದ್ದು, ಅದು ಚರ್ಮದ ಕಂದುಬಣ್ಣವನ್ನು ತಿಳಿಗೊಳಿಸಿದರೆ, ಜೇನು-ಸೌತೆರಸ ಹಾಗೂ ಗುಲಾಬಿ ಜಲಗಳು ಚರ್ಮಕ್ಕೆ ತಂಪು ಉಂಟುಮಾಡುತ್ತವೆ.
4 ಚಮಚ ಕಡಲೆಹಿಟ್ಟು , 2 ಚಿಟಿಕೆ ಅರಸಿನ ಪುಡಿ, 5 ಚಮಚ ಗುಲಾಬಿ ಜಲ, 5 ಚಮಚ ಹಾಲು ಬೆರೆಸಿ ಫೇಸ್‌ಪ್ಯಾಕ್ ಮಾಡಬೇಕು. ಮುಖಕ್ಕೆ ಲೇಪಿಸಿ, 20 ನಿಮಿಷಗಳ ಬಳಿಕ ತೊಳೆಯಬೇಕು. ಮಸೂರ್‌ದಾಲ್-ಕುಮಾರೀಲೇಪ
5 ಚಮಚ ಮಸೂರ್‌ದಾಲ್ ಪುಡಿ, 5 ಚಮಚ ಕುಮಾರೀ ತಿರುಳು (ಅಲೋವೆರಾ) ಹಾಗೂ 5 ಚಮಚ ಟೊಮೆಟೋ ರಸ- ಇವುಗಳನ್ನು ಬೆರೆಸಿ ಫೇಸ್‌ಪ್ಯಾಕ್ ಮಾಡಿ 1/2 ಗಂಟೆಯ ಬಳಿಕ ತೊಳೆಯಬೇಕು. ಎರಡು ದಿನಗಳಿಗೊಮ್ಮೆ ಬಳಸಿದರೆ ಬಿಸಿಲುಗಂದು ನಿವಾರಕ.
Related Articles
15 ಚಮಚ ಮಜ್ಜಿಗೆಗೆ 10 ಚಮಚ ಓಟ್‌ಮೀಲ್ ಬೆರೆಸಿ ಚೆನ್ನಾಗಿ ಕಲಸಿ ಪೇಸ್ಟ್ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು. ಬಿಸಿಲುಗಂದು ನಿವಾರಣೆ ಮಾಡುವ ಈ ಸ್ಕ್ರಬ್ ವಾರಕ್ಕೆ 2 ಬಾರಿ ಬಳಸಬೇಕು.
Advertisement
ಸ್ಟ್ರಾಬೆರಿ ಹಾಗೂ ಹಾಲಿನ ಫೇಸ್ಮಾಸ್ಕ್ಎರಡು ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣುಗಳನ್ನು ಮಸೆದು ಹಾಲು ಬೆರೆಸಿ ಪೇಸ್ಟ್ ತಯಾರಿಸಬೇಕು. ಮುಖಕ್ಕೆ ವರ್ತುಲಾಕಾರದಲ್ಲಿ ಮಾಲೀಶು ಮಾಡುತ್ತ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಪರಿಣಾಮಕಾರಿ. ಹಸಿ ಆಲೂಗಡ್ಡೆ ರಸ ಹಾಗೂ ನಿಂಬೆರಸ ಸಮಪ್ರಮಾಣದಲ್ಲಿ ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು. ಚಂದನ ಪುಡಿ ಹಾಗೂ ರೋಸ್‌ವಾಟರ್
3 ಚಮಚ ಚಂದನ ಹಾಗೂ ರೋಸ್‌ವಾಟರ್ ಪುಡಿಯನ್ನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಬೇಕು. 15 ನಿಮಿಷದ ನಂತರ ತೊಳೆಯಬೇಕು. ಇದನ್ನು ನಿತ್ಯ ಲೇಪಿಸಿದರೆ ಬಿಸಿಲುಗಂದು ನಿವಾರಣೆಯಾಗುತ್ತದೆ. ಜೊತೆಗೆ ಬಿಸಿಲುಗಂದು ಬಾರದಂತೆ ತಡೆಗಟ್ಟಲೂ ಪರಿಣಾಮಕಾರಿ. ಚಂದನ ಹಾಗೂ ಕಾಯಿಹಾಲಿನ ಫೇಸ್‌ಮಾಸ್ಕ್
5 ಚಮಚ ಚಂದನ ಪುಡಿ, 10 ಚಮಚ ದಪ್ಪ ಕಾಯಿಹಾಲು ಬೆರೆಸಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆಯಬೇಕು. ಇದೇ ರೀತಿ ಚಂದನ, ಎಳನೀರು, ಬಾದಾಮಿ ಅರೆದು ಲೇಪಿಸಿದರೂ ಪರಿಣಾಮಕಾರಿ. ಉರಿ ಇರುವಾಗ ಇದು ಉತ್ತಮ. ಅನಾನಸು, ಜೇನಿ ಲೇಪ
10 ಚಮಚ ಅನಾನಸು ರಸ, 5 ಚಮಚ ಜೇನು ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಹಚ್ಚಬೇಕು. 20 ನಿಮಿಷದ ನಂತರ ತೊಳೆಯಬೇಕು. ತಾಜಾ ಎಳೆ ಕ್ಯಾಬೇಜ್ ಎಲೆಯನ್ನು ಫ್ರಿಜ್ ನೀರಿನಲ್ಲಿ ಅದ್ದಿ ಬಿಸಿಲುಗಂದು ಇರುವ ಭಾಗದ ಮೇಲೆ ಇರಿಸಬೇಕು. 15 ನಿಮಿಷಗಳ ಬಳಿಕ ತೆಗೆಯಬೇಕು. ಕ್ಯಾಬೇಜ್ ಎಲೆರಸ ಹಾಗೂ ಜೇನು ಬೆರೆಸಿ ಲೇಪಿಸಿದರೂ ಹಿತಕರ. ಹಾಗಲಕಾಯಿರಸ ಲೇಪ
ತಾಜಾ ಹಾಗಲಕಾಯಿಯನ್ನು ಕತ್ತರಿಸಿ, ಅರೆದು ಜ್ಯೂಸ್ ತೆಗೆಯಬೇಕು. ಇದನ್ನು ಮುಖಕ್ಕೆ ಲೇಪಿಸಿ 5 ನಿಮಿಷ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ತೊಳೆಯಬೇಕು. ಉರಿ, ತುರಿಕೆ ಇರುವ ಬಿಸಿಲುಗಂದು ನಿವಾರಣೆ ಮಾಡಲು ಇದು ಉತ್ತಮ. ದಿನಕ್ಕೆ 2 ಬಾರಿ ಇದನ್ನು ಉಪಯೋಗಿಸಬೇಕು. ಮುಲ್ತಾನಿಮಿಟ್ಟಿ , ಅಲೋವೆರಾ ತಿರುಳು ಹಾಗೂ ಮೊಸರಿನ ಫೇಸ್‌ಮಾಸ್ಕ್
3 ಚಮಚ ಮುಲ್ತಾನಿಮಿಟ್ಟಿ , 2 ಚಮಚ ಅಲೋವೆರಾ ತಿರುಳು ಹಾಗೂ 5 ಚಮಚ ದಪ್ಪ ಸಿಹಿಮೊಸರು ಬೆರೆಸಿ ಮುಖಕ್ಕೆ ಲೇಪಿಸಬೇಕು. 1/2 ಗಂಟೆಯ ಬಳಿಕ ತೊಳೆದರೆ ಬಿಸಿಲುಗಂದು ನಿವಾರಕ.
ಹಾಲಿನ ಕೆನೆ ಹಾಗೂ ಕೇಸರಿ ಲೇಪ
4 ಚಮಚ ಹಾಲಿನ ಕೆನೆಗೆ 8-10 ಕೇಸರಿ ದಳಗಳನ್ನು ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಬಿಸಿಲುಗಂದು ಇರುವ ಭಾಗಕ್ಕೆ ಹಚ್ಚಿ ಮಾಲೀಶು ಮಾಡಿ 15 ನಿಮಿಷಗಳ ಬಳಿಕ ತೊಳೆಯಬೇಕು. ಕೇಸರಿಯು ಉತ್ತಮ ವರ್ಣದ್ರವ್ಯ. ಹಾಲಿನ ಕೆನೆಯೂ ಚರ್ಮಕ್ಕೆ ಪೋಷಣೆ ಹಾಗೂ ಕಾಂತಿ ನೀಡುತ್ತದೆ. ಕಾರ್ನ್ಮೀಲ್ ಹಾಗೂ ನಿಂಬೆರಸದ ಲೇಪ
4 ಚಮಚ ಕಾರ್ನ್ಮೀಲ್, 8 ಚಮಚ ನಿಂಬೆರಸ ಬೆರೆಸಿ ಬಿಸಿಲುಗಂದು ಇರುವ ಭಾಗಕ್ಕೆ ಲೇಪಿಸಿ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 20 ನಿಮಿಷದ ಬಳಿಕ ತೊಳೆಯಬೇಕು. ಇದು ಉತ್ತಮ ಸðಬ್. ವಾರಕ್ಕೆ 2-3 ಬಾರಿ ಬಳಸಬೇಕು. ಪಪ್ಪಾಯ, ಜೇನಿ ಲೇಪ
ಕಳಿತ ಪಪ್ಪಾಯದ ತಿರುಳು 4 ಚಮಚ ತೆಗೆದುಕೊಂಡು 4 ಚಮಚ ಜೇನು ಬೆರೆಸಿ, ಫೇಸ್‌ಪ್ಯಾಕ್ ಮಾಡಬೇಕು. 1/2 ಗಂಟೆಯ ಬಳಿಕ ತೊಳೆಯಬೇಕು. ಇದರ ನಿತ್ಯಲೇಪನ ಪರಿಣಾಮಕಾರಿ. ಡಾ. ಅನುರಾಧಾ ಕಾಮತ್