Advertisement
ಇವುಗಳಿಗೆಲ್ಲ ಭಾರಿ ಬೇಡಿಕೆತಂಪು ಪಾನೀಯ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಕಲ್ಲಂಗಡಿ, ಎಳನೀರು, ಮಜ್ಜಿಗೆ, ಲಸ್ಸಿ, ಕಬ್ಬಿನಹಾಲು, ಫ್ರೆಶ್ ಲೆಮನ್, ಜೀರಾಸೋಡ ಮೊದಲಾದ ಪಾನೀಯಗಳು ಮತ್ತು ಬ್ರಾಂಡೆಡ್ ಕಂಪೆನಿಗಳ ಐಸ್‌ಕೀÅಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಹಣ್ಣು, ಜ್ಯೂಸ್ ವ್ಯಾಪಾರದ ಬಂಡಿಗಳು ನಗರದ ಪ್ರಮುಖ ಬೀದಿಗಳಲ್ಲಿ , ಮರಗಳ ಅಡಿಯಲ್ಲಿ ಕಾಣುತ್ತಿದೆ. ತಳ್ಳುಗಾಡಿಗಳಲ್ಲಿ ಎಳನೀರು, ಹಣ್ಣುಗಳನ್ನು ಇಟ್ಟುಕೊಂಡು ಬೀದಿ ಸುತ್ತಿ ಮಾರಾಟ ಮಾಡುವವರು ಅಲ್ಲಲ್ಲಿ ಹುಟ್ಟಿಕೊಂಡಿದ್ದಾರೆ. ತಳ್ಳುಗಾಡಿಯಲ್ಲಿ ಕಬ್ಬು ಅರೆಯುವ ಸಣ್ಣ ಯಂತ್ರವನ್ನು ಇಟ್ಟುಕೊಂಡು ಬೀದಿಬದಿಯಲ್ಲಿ ಕಬ್ಬಿನ ಹಾಲು ಮಾರಾಟವೂ ಹೆಚ್ಚಿದೆ. ಬಿಸಿಲಿನ ತಾಪ ಹೆಚ್ಚಾದಂತೆ ಹಣ್ಣು, ಜ್ಯೂಸ್, ಎಳನೀರು ಮಾರುವವರಿಗೆ ಇದೀಗ ವ್ಯಾಪಾರದ ಸುಗ್ಗಿಯೇ ಸುಗ್ಗಿ.
Related Articles
ಮಾರುಕಟ್ಟೆಯಲ್ಲಿ ಕೂಡ ಎಳನೀರು ಕಾಣಸಿಗುವುದು ಆಪರೂಪ. ಕರಾವಳಿಯಲ್ಲಿ ಎಳನೀರಿಗೆ ಭಾರಿ ಬೇಡಿಕೆಯಿದ್ದು, 35ರಿಂದ 40 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ. ದರ ಏರಿಕೆಯಿಂದ ಎಳನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಿಸಿಲಿನ ಧಗೆಯಿಂದಾಗಿ ಬೇಡಿಕೆಯೂ ಹೆಚ್ಚಿದೆ. ಆದರೂ ಗ್ರಾಹಕರು ಬಿಸಿಲಿನ ದಾಹವನ್ನು ತಣಿಸಲು ಎಳನೀರು ಕುಡಿಯಲು ಮುಂದಾಗಿದ್ದಾರೆ.
Advertisement
ತೆಂಗಿನಕಾಯಿ ದರ ಏರಿಕೆಯಾಗಿರುವ ಕಾರಣ ಎಳನೀರಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದೆ.
ತಾಳೆಬೊಂಡಕ್ಕೂ ಡಿಮ್ಯಾಂಡ್ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಶುದ್ದ ಆಹಾರ ಮತ್ತು ಕಲಬೆರಕೆ ಇಲ್ಲದ ಕೆಲವೇ ಕೆಲವು ಆಹಾರದಲ್ಲಿ ನಿಸರ್ಗದತ್ತವಾಗಿ ಕೆಲವೊಂದು ಭಾಗಗಳಲ್ಲಿ ಮಾತ್ರ ಸಿಗುವ ತಾಳೆಬೊಂಡಕ್ಕೆ ಮಾತ್ರ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ರಸ್ತೆಯಲ್ಲಿ ಹಾದು ಹೋಗುವ ಸ್ಥಳೀಯರು ಹಾಗೂ ಪ್ರವಾಸಿಗರೂ ತಾಳೆಬೊಂಡದ ರಾಶಿ ಕಂಡು ವಾಹನವನ್ನು ನಿಲ್ಲಿಸಿ ಖರೀದಿಸುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಮೂರು ಕಣ್ಣುಗಳಿರುವ ಒಂದು ತಾಳೆಬೊಂಡ 20ರಿಂದ 25 ರೂ. ಗೆ ಮಾರಾಟವಾಗುತ್ತಿವೆ.