Advertisement

ಬಿಸಿಲದು ಬರಿ ಬಿಸಿಲಲ್ಲವೋ…

09:18 AM Feb 13, 2020 | mahesh |

ಹಿಂದಿನ ತಲೆಮಾರಿನ ಜನ, ಈಗಿನವರ ಥರ, “ಅಯ್ಯೋ ಬಿಸಿಲ್ಗೆ ಹೋದ್ರೆ ಸನ್‌ ಬರ್ನ್ ಆಗುತ್ತೆ. ಅದಿಕ್ಕೆ ಅಂಬ್ರೆಲಾ ತಗೊಂಡೇ ಹೋಗೋದು ನಾನು’ ಅಂತಿದ್ದಿಲ್ಲ.ಸನ್‌ ಸ್ಕ್ರೀನ್‌ ಲೋಷನ್‌ ಎಲ್ಲಿದ್ರಿ ಅವಾಗೆಲ್ಲ? ತಣ್ಣಗನಿ ನೀರು ಉಗ್ಗಿ, ಮುಖ ತೊಳಕೊಂಡು, ಒಂದು ಕರಣಿ ಬೆಲ್ಲ, ಮಣ್ಣಿನ ಗಡಿಗಿ ಒಳಗಿನ ಒಂದು ತಂಬಿಗಿ ನೀರು ಗಟ ಗಟ ಕುಡೀತಿದ್ರು.

Advertisement

“ಆದ್ರೂ ಈ ವರ್ಷ ಭಾರೀ ಬಿಸಲು. ಹೋದ ವರ್ಷ ಇಸ್ಟ್ ಬಿಸಲ್‌ ಇದ್ದಿದ್ದಿಲ್ಲ ಬಿಡ್ರಿ. ತಲಿ ಮ್ಯಾಲೆ ತಣ್ಣನಿ ನೀರು ಹೊಯ್ಕೋಬೇಕು ಅನಸ್ತದ್‌ ನೋಡ್ರಿ..’- ಇದು ಪ್ರತಿ ವರ್ಷದ ಕಾಮನ್‌ ಡೈಲಾಗ್‌.

ಚಳಿಗಾಲ ಮುಗದ ಮ್ಯಾಲೆ ಬ್ಯಾಸಿಗಿ ಬರಲೇಬೇಕು. ಚಳಿಗಾಲ ಮುಗದ್‌ ಕೂಡ್ಲೆà ಮಳಿ ಸುರು ಆದ್ರ, ನಮಗ ಬೆಂಕಿ ಇಂದ ಬಾಂಡಲಿಗೆ ಹಾಕಿದಂಗ್‌ ಆಗ್ತದ್ರಿ. ಅದಕ್ಕ ಸ್ವಲ್ಪ್ ಥಂಡಿ ಮಹತ್ವ ಗೊತ್ತಾಗ್ಲಿ ಅಂತ ನಮ್ಮ ಪ್ರಕೃತಿ ಮಾತೆ ನಮಗ್‌ ಕೊಟ್ಟ ವರಾ ಇದು. ಥಂಡಿ ಇದ್ದಾಗ ಚರ್ಮ ಒಣಗಿ ಬಿರಿ ಬಿಟ್ಟಿರ್ತದ. ಅದಕ್ಕ ಬ್ಯಾಸಿಗಿ ಸುರು ಆದ ಕೂಡ್ಲೆà ಬರೋ ಹಬ್ಬ ಸಂಕ್ರಾಂತಿ. ಎಣ್ಣಿ ಪದಾರ್ಥ, ಎಳ್ಳು ಹೋಳಿಗಿ, ಶೇಂಗಾ ಹೋಳಿಗಿ, ಒಣ ಕೊಬ್ರಿ ಇಂಥವೆಲ್ಲ ತಿಂತೀವಿ. ಜೊತಿಗೆ ಎಳ್ಳು, ಬೆಲ್ಲ, ಶೇಂಗಾ ಬೀಜ, ಕೊಬ್ಬರಿ, ಪುಟಾಣಿ ಬೆರೆಸಿದ ಎಳ್ಳು- ಬೆಲ್ಲವನ್ನು ಬಂಧುಗಳಿಗೂ ಬೀತೇವಿ. ಜೊತಿಗೆ ಹೆಸರು ಬ್ಯಾಳಿ ಕಿಚಡಿ. ಅದೇನೋ ಅಂತೀರಲ್ಲ “ಖಾರ ಪೊಂಗಲ್‌’, “ಸಿಹಿ ಪೊಂಗಲ್‌’ ಅಂತ ಅದ.

ನಮ್ಮ ಹಿಂದಿನ ತಲೆಮಾರಿನ ಜನ ಭಾರಿ ಶ್ಯಾಣೇರಿದ್ರು. ಕಾಲಕ್‌ ತಕ್ಕಂಗ ಅಡಿಗಿ ಊಟ ಅಂತಿದ್ರು.. ಬಿಸಲಾಗ ಕೆಲಸ ಮಾಡಿ, ಬೆವರು ಹೊರಗ್‌ ಹೋದಷ್ಟೂ ಚೊಲೋ, ಮೈಯಾಗಿನ ಕೊಬ್ಬು ಕರಗ್ತದ ಅಂತಿದ್ರು.. ಈಗಿನ ಜನರ ಥರ, “ಅಯ್ಯೋ ಬಿಸಿಲ್ಗೆ ಹೋದ್ರೆ ಸನ್‌ ಬರ್ನ್ ಆಗುತ್ತೆ. ಅದಿಕ್ಕೆ ಅಂಬ್ರೆಲಾ ತಗೊಂಡೇ ಹೋಗೋದು ನಾನು’ ಅಂತಿದ್ದಿಲ್ಲ.ಸನ್‌ ಸ್ಕ್ರೀನ್‌ ಲೋಷನ್‌ ಎಲ್ಲಿದ್ರಿ ಅವಾಗೆಲ್ಲ? ತಣ್ಣಗನಿ ನೀರು ಉಗ್ಗಿಕೊಂಡು ಮುಖ ತೊಳಕೊಂಡು, ಒಂದು ಕರಣಿ ಬೆಲ್ಲ, ಮಣ್ಣಿನ ಗಡಿಗಿ ಒಳಗಿನ ಒಂದು ತಂಬಿಗಿ ನೀರು ಗಟ ಗಟ ಕುಡೀತಿದ್ರು.

ಮನಿ ಒಳಗ್‌ ಆಕಳ, ಎಮ್ಮಿ ಖಾಯಂ ಅವಾಗ. ಹಂಗಾಗಿ ತಾಜಾ ಮಜ್ಜಿಗಿ ಸಿಗ್ತಿತ್ತು. ಅದ್ಕ ಸ್ವಲ್ಪ ಇಂಗು ಮತ್‌ ಬಾಳಕ ಒಗ್ಗರಣಿ ಕೊಟ್ಟು ಮೂರ್‌ ಹೊತ್ತೂ ಕುಡೀತಿದ್ರು. ಅನ್ನಾ ಬಸದು ಗಂಜಿ ತಗದು ಸೇರಿಸಿ ಜೋಳದ ನುಚ್ಚು, ಅಂಬಲಿ ಜೊತಿಗಿ ಉಪ್ಪಿನಕಾಯಿ ನೆಂಜಿಕೊಂಡು ಎರಡೆರಡು ತಾಟು ಕುಡೀತಿದ್ರು. ಮನಿ ಸುತ್ತಲೂ ಗಿಡ ಹಚ್ಚತಿದ್ರು.

Advertisement

ಭಾರಿ ಬಿಸಲು ಅದ ಅನ್ಕೋತ ನೀವು ರಣ ರಣ ಬಿಸಲ್‌ ಹೊತ್ತಿನ್ಯಾಗ ದಬಾ ದಬಾ ಐದಾರು ಬಕೀಟ್‌ ನೀರು ಅಂಗಳಕ್ಕ ಹಾಕಿದ್ರ ಏನೇನು ಉಪಯೋಗ್‌ ಇಲ್ಲ ನೋಡ್ರಿ. ಕೆಟ್ಟ ಬಿಸಿಲಿಗೆ ನೀರು ಆವಿ ಆಗಿ ಹೋಗ್ತದ. ಝಳ ಇನ್ನೂ ಹೆಚ್ಚಗಿ ಆಗ್ತದ. ಅದಕ್ಕ ಸಂಜಿ ಹೊತ್ತಿಗೆ ಅಂಗಳಕ್ಕ, ಗಿಡಕ್ಕ ನೀರು ಹಾಕೆºàಕು. ಬೆಳತನಕ ತಣ್ಣಗ ಇರ್ತದ.

ಅವಾಗೆಲ್ಲ ಈಗಿನ ಹಂಗ 28 ಥರ ಐಸ್‌ಕ್ರೀಂ ಇರ್ತಿದ್ದಿಲ್ಲ, ನೋಡ್ರಿ. ಗಡಿಗಿ ಒಳಗಿನ ಘಟ್ಟಿ ಕೆನಿ ಮೊಸರಿಗ, ಸಕ್ರಿ ಹಾಕ್ಕೊಂಡ್ರೆ ಅದೇ ಐಸ್‌ಕ್ರೀಂ. ರಾಗಿ ಗಂಜಿ, ಜೋಳದ ಹಿಟ್ಟಿನ ಅಂಬಲಿಗೆ ಮಜ್ಜಿಗಿ ಹಾಕ್ಕೊಂಡು ಕುಡದ್ರ, ಈಗಿನ ನಾನಾ ನಮೂನಿ ಬಣ್ಣ ಮತ್ತ ಹೆಸರಿನ ಜ್ಯೂಸ್‌ ನಾಚಬೇಕು ಅಂಥಾ ರುಚಿ! ಸುಮ್ನ ಹಣ್ಣು ತಿನ್ನೋದು ಬಿಟ್ಟು ಅದನ್ನ ಮಿಕ್ಸರ್‌ಗೆ ಹಾಕಿ, ಸಕ್ರಿ ಹಾಕಿ ಯಾಕ್‌ ಕುಡೀಬೇಕ್ರಿ? ಅದು ಹಂಗ ಮಾಡಿದ ಕೂಡ್ಲೆà ಕುಡಿಯಂಗಿಲ್ಲ. ಫ್ರಿಡ್ಜ್ ಒಳಗ್‌ ಒಂದು ತಾಸು ಇಟ್ಟು ಕುಡಿಯೋದು. ಅದರಾಗಿನ ಸತ್ವ ಹಾರಿ ಹೋಗಿರ್ತದ. ಮನೆಯಲ್ಲೇ ಫ್ರೂಟ್‌ ಸಲಾಡ್‌ ಮಾಡ್ಕೊಳಿ. ಪ್ಯಾಕ್‌ ಮಾಡಿ ಇಟ್ಟ ಎಳೆನೀರು ಯಾವಾಗಿಂದೊ ಏನೋ, ಅದರ ಬದಲು ತಾಜಾ ಎಳೆಗಾಯಿ ಕೆತ್ತಿಸಿ ಕುಡೀರಿ.

ಬ್ಯಾಸಿಗಿ ಅಂದಕೂಡ್ಲೆà ನಮ್ಮ ಅವ್ವ, ದೊಡ್ಡವ್ವ, ಅಜ್ಜಿ ಎಲ್ಲಾರು ಸೇರಿ ವರ್ಷಕ್ಕ ಆಗೋಷ್ಟು ಕಾಯಿ ಸಂಡಿಗಿ, ಶಾವಿಗಿ ಸಂಡಿಗಿ, ಸಾಬೂದಾಣಿ ಸಂಡಿಗಿ, ನಾನಾ ನಮೂನಿ ಹಪ್ಪಳ, ಥರ ಥರದ ಉಪ್ಪಿನಕಾಯಿ, ವರ್ಷಕ್ಕ ಆಗೋಷ್ಟು ಖಾರದ ಪುಡಿ, ಹುಣಸೇಹಣ್ಣು ತಯಾರಿ ಮಾಡಿ ಇಟ್ಕೊತಿದ್ರು. ಅಲ್ರಿ, ಇರುವಿ ಅಂತ ಸಣ್ಣ ಪ್ರಾಣೀನೂ ಮಳೆಗಾಲ ಬರ್ತದ ಅಂತ ಆಹಾರ ಕೂಡಿ ಇಟ್ಕೊತದ, ಅದನ್ನ ನೋಡಿ ಕಲೀಬೇಕಲ್ಲ ನಾವೂನು!

ಇನ್ನೇನು, ಹುಡುಗರೂY ಪರೀಕ್ಷಾ ಮುಗೀತದ. ಅವುನ್ನ ಅವರ ಅಜ್ಜಿ ಮನಿ, ಅತ್ಯಾನ್‌ ಮನಿ ಅಂತ ಕಳಿಸಿ ಕೊಡ್ರಿ. ಯಾವುದೋ ಬೇಸಿಗೆ ಶಿಬಿರಕ್ಕ ಹಾಕಿ, ರೊಕ್ಕ ಸುರಿಯೋ ದಡ್ಡತನ ಮಾಡಬ್ಯಾಡ್ರಿ. ಅಜ್ಜಿ ರಂಗೋಲಿ, ಹಾಡು ಕಲಿಸತಾರ, ಅಜ್ಜ ಕಥಿ ಹೇಳಿ ಸಂಜಿಕೆ ಪಾರ್ಕ್‌ಗೆ ಕರ್ಕೊಂಡು ಹೋಗ್ತಾರ. ಅತ್ಯಾ ಮಸ್ತ್ ಮಸ್ತ್ ಅಡಿಗಿ ಮಾಡಿ ತಿನಸ್ತಾರ. ಮಕ್ಕಳನ್ನ ಹೊರಗಿನ ಮಕ್ಕಳ ಜೊತಿಗೆ ಆಡಲಿಕ್ಕೆ ಬಿಡ್ರಿ. ಹೊಂದಿಕೊಂಡು ಆಡೋದು ಕಲೀಲಿ. ಹಂಚಿ ತಿನ್ಲಿ. ಹಾಂ, ಮಕ್ಳಷ್ಟೇ ಅಲ್ಲ, ನೀವೂ ಬ್ಯಾಸಿಗೇನ ಎಂಜಾಯ್‌ ಮಾಡ್ರಪ್ಪ…

-ಲತಾ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next