Advertisement

ಝಳಕ್ಕೆ ಪ್ರಜ್ಞೆ ತಪ್ಪಿದ ಕಾರ್ಮಿಕರು

01:09 PM May 01, 2022 | Team Udayavani |

ಜೇವರ್ಗಿ: ತಾಲೂಕಿನ ಹರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇವನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರು ಬಿಸಿಲಿನ ಝಳಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಘಟನೆ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

Advertisement

ಅರ್ಜುನ ಬಸಣ್ಣ ತಳವಾರ, ನಾಗೇಶ ದುರ್ಗಪ್ಪ ಬಂಡಿವಡ್ಡರ್‌, ಅಕ್ಕಮಂಚಮ್ಮ ಬಸವರಾಜ ಪೂಜಾರಿ ಎನ್ನುವರು ಕೂಲಿ ಕೆಲಸ ಮಾಡುವ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಅವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಅನೇಕ ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನರೇಗಾ ಕೂಲಿ ಕೆಲಸದ ಸಮಯವನ್ನು ಬೇಸಿಗೆ ಮುಗಿಯುವ ವರೆಗೆ ಬೆಳಗ್ಗೆ 7ರಿಂದ 11ಗಂಟೆ ವರೆಗೆ ನಿಗದಿಪಡಿಸಬೇಕು ಎಂದು ಹೋರಾಟ ನಡೆಸಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಬೆಳಗ್ಗೆ 7ರಿಂದ ಸಂಜೆ 5ಗಂಟೆ ವರೆಗೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಸುಭಾಷ ಹೊಸಮನಿ ಆರೋಪಿಸಿದ್ದಾರೆ.

ಕೆಂಡದಂತಹ ಬಿಸಿಲಿಗೆ ಮನೆ ಬಿಟ್ಟು ಹೊರಬಾರ ದಂತ ಪರಿಸ್ಥಿತಿಯಲ್ಲಿ ಸಂಜೆವರೆಗೆ ಕೆಲಸ ತೆಗೆದು ಕೊಳ್ಳುತ್ತಿರುವುದರಿಂದ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಅನೇಕ ಬಾರಿ ತಾಪಂ ಇಒಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ನರೇಗಾ ಕೆಲಸದ ಸಮಯವನ್ನು ಬದಲಿಸದೇ ಹೋದರೇ ತಾಲೂಕಿನಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೊಸಮನಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next