ಟೋಕಿಯೊ: ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 64 ವಿಭಾಗದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಸುಮಿತ್ ಆಂಟಿಲ್ 68.55 ಮೀಟರ್ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದ ಟೋಕಿಯೊ ಪ್ಯಾರಾಲಿಂಪಿಕ್ ಗೇಮ್ಸ್ ಭಾರತ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಾಯಿತು.
ಸಹ ಆಟಗಾರ ಸಂದೀಪ್ ಚೌಧರಿ ನಾಲ್ಕನೇ ಸ್ಥಾನ ಪಡೆದರು. ಅವರು 62.20 ಮೀಟರ್ ಜಾವೆಲಿನ್ ಎಸೆದರು.
ಇದನ್ನೂ ಓದಿ:ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಶಾಂತ್ ಅನುಮಾನ: ಅಶ್ವಿನ್ ಆಡುವುದು ಬಹುತೇಕ ಖಚಿತ
ಭಾರತದ ಶೂಟರ್ ಅವನಿ ಲೇಖಾರ 10 ಮೀ ಏರ್ ರೈಪಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 46 ವಿಭಾಗದಲ್ಲಿ ಭಾರತದ ದೇವೆಂದ್ರ ಝಾಝರಿಯಾ ಬೆಳ್ಳಿ ಗೆದ್ದರೆ, ಸುಂದರ್ ಸಿಂಗ್ ಗುಜ್ಜರ್ ಕಂಚು ಗೆದ್ದುಕೊಂಡಿದ್ದರು.