Advertisement

ಕನ್ನಡ ಸಾರಸ್ವತ ಲೋಕದ ಹಿರಿಯ ಸಾಹಿತಿ ಸುಮತೀಂದ್ರ ನಾಡಿಗ್‌ ವಿಧಿವಶ 

09:41 AM Aug 07, 2018 | |

ಬೆಂಗಳೂರು: ಹಿರಿಯ ಸಾಹಿತಿ,ಕವಿ,ಪ್ರಖ್ಯಾತ ವಿಮರ್ಶಕ ಸುಮತೀಂದ್ರ ನಾಡಿಗ್‌ ಅವರು ಮಂಗಳವಾರ ಬೆಳಗ್ಗೆ   ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. 

Advertisement

ಕಳೆದ ಮೂರು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಪುಟ್ಟೇನಹಳ್ಳಿ ನಿವಾಸದಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಚಿಕ್ಕಮಗಳೂರಿನ ಕಳಸದಲ್ಲಿ 1935 ರಲ್ಲಿ ಜನಿಸಿದ್ದ ನಾಡಿಗ್‌ ಅವರ ಪೂರ್ಣ ಹೆಸರು ಸಮತೀಂದ್ರ ರಾಘವೇಂದ್ರ ನಾಡಿಗ್‌, ಇಂಗ್ಲೀಷ್‌ ಪ್ರೋಫೆಸರ್‌ ಆಗಿ ನಿವೃತ್ತರಾಗಿದ್ದ ಅವರು ಆಧುನಿಕ ಶೈಲಿಯ ಕವಿ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದರು.  

ಕವಿ ಗೋಪಾಲ ಕೃಷ್ಣ ಅಡಿಗ ಅವರ ಆಪ್ತರಲ್ಲಿ ಓರ್ವರಾಗಿದ್ದ ನಾಡಿಗ್‌,ಜಿ.ಎಸ್‌.ಶಿವರುದ್ರಪ್ಪ, ಎಸ್‌.ಎಲ್‌.ಭೈರಪ್ಪ ಮೊದಲಾದ ಮೇರು ಸಾಹಿತಿಗಳ ಒಡನಾಡ ಹೊಂದಿದ್ದರು. 

ನಾಡಿಗ್‌ ಅವರು ಬರೆದ ‘ದಾಂಪತ್ಯ ಗೀತ’ ಇಂಗ್ಲೀಷ್‌ ಸೇರಿದಂತೆ ಬಹುಭಾಷೆಗಳಿಗೆ ಭಾಷಾಂತರಗೊಂಡಿದೆ. ಶಬ್ಧ ಮಾರ್ತಾಂಡ ಎಂಬ ಬಿರುದು ಅವರಿಗೆ ಒಲಿದು ಬಂದಿತ್ತು. 

Advertisement

ಬಹುಭಾಷಾ ಹಿಡಿತ ಹೊಂದಿದ್ದ ನಾಡಿಗ್‌ ಅವರು ಕನ್ನಡ, ಇಂಗ್ಲೀಷ್‌ ನಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರೆ, ಹಿಂದಿ, ಮರಾಠಿ,ಕೊಂಕಣಿ ಮತ್ತು ಬೆಂಗಾಲಿ ಭಾಷೆಯನ್ನೂ ಬಲ್ಲವರಾಗಿದ್ದರು. ಹಲವು ಬರಹಗಳು ಬೆಂಗಾಲಿಯಿಂದ ಕನ್ನಡಕ್ಕೆ , ಕನ್ನಡದಿಂದ ಇಂಗ್ಲೀಷ್‌ಗೆ ತರ್ಜುಮೆ ಮಾಡಿದ ಹಿರಿಮೆ ಅವರದ್ದು. 

Advertisement

Udayavani is now on Telegram. Click here to join our channel and stay updated with the latest news.

Next