Advertisement

ಪಾಕ್‌ನ ಮೊದಲ ಹಿಂದೂ ನ್ಯಾಯಾಧೀಶೆ ಸುಮನ್‌

12:50 AM Jan 30, 2019 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದವರಾದ ಸುಮನ್‌ ಕುಮಾರಿ ಎಂಬವರು ಇಲ್ಲಿನ ಸಿವಿಲ್‌ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ಈ ಮೂಲಕ ಈ ಪದವಿಗೇರಿದ ಪಾಕಿಸ್ತಾನದ ಮೊದಲ ಹಿಂದೂ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Advertisement

ಖಂಬರ್‌-ಶಹದಾಕೊತ್‌ ಎಂಬ ಜಿಲ್ಲೆಯವರಾದ ಇವರು ಅದೇ ಜಿಲ್ಲೆಯಲ್ಲೇ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪಾಕಿಸ್ಥಾನದ ಹೈದರಾಬಾದ್‌ನಲ್ಲಿ ಕಾನೂನು ವಿಷಯದಲ್ಲಿ ಸ್ನಾತಕ ಪದವಿ ಪಡೆದಿದ್ದ ಇವರು, ಅನಂತರ, ಕರಾಚಿಯ ಸಾjಬಿಸ್ತ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆಂದು ಡಾನ್‌ ಪತ್ರಿಕೆ ಹೇಳಿದೆ. ಸಿಂಧ್‌ನ ಹಿಂದುಳಿದ ಪ್ರದೇಶಗಳ ಬಡ ಜನರಿಗೆ ಕಾನೂನು ವಿಷಯಗಳಲ್ಲಿ ಸಾಕಷ್ಟು ಸಲಹೆ ಮತ್ತು ನೆರವಿನ ಅಗತ್ಯವಿದೆ. ಅದಕ್ಕಾಗಿಯೇ ನಾನು ಕಾನೂನು ಕ್ಷೇತ್ರ ಪ್ರವೇಶಿಸಿದೆ ಎಂದು ಸುಮನ್‌ ಹೇಳಿದ್ದಾರೆ. ತಮ್ಮ ಪ್ರಾಂತ್ಯದ ಕಡುಬಡವರಿಗೆ ಉಚಿತವಾಗಿ ಕಾನೂನು ಸೇವೆ ಸಲ್ಲಿಸುವ ದೃಢ ನಿರ್ಧಾರ ಮಾಡಿದ್ದಾರೆಂದು ಅವರ ತಂದೆ ಡಾ| ಪವನ್‌ ಕುಮಾರ್‌ ಬೋದನ್‌ ತಿಳಿಸಿದ್ದಾರೆ. ಅಂದಹಾಗೆ, ಡಾ| ಪವನ್‌ ಕುಮಾರ್‌ ಕಣ್ಣಿನ ತಜ್ಞರಾಗಿದ್ದು, ಸುಮನ್‌ ಹಿರಿಯ ಸಹೋದರಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದಾರೆ. ಮತ್ತೂಬ್ಬ ಸಹೋದರಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next