Advertisement

ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಕೇಳಿದ ಸುಮಲತಾ

02:29 AM Apr 17, 2019 | sudhir |

ಮಂಡ್ಯ: ಸೆರಗೊಡ್ಡಿ ಕೇಳು ತ್ತಿದ್ದೇನೆ, ನಿಮ್ಮ ಸ್ವಾಭಿಮಾನದ ಭಿಕ್ಷೆಯನ್ನು ನನಗೆ ಕೊಡಿ…
– ಇದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಮಂಡ್ಯ ದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಜನರಲ್ಲಿ ಮನವಿ ಮಾಡಿದ ಪರಿ. ನಾನು ಅಂಬರೀಷ್‌ ಧರ್ಮಪತ್ನಿ, ನನಗೊಂದು ಅವಕಾಶ ಕೊಟ್ಟು ನೋಡಿ, ನಾನು ಏನೂಂತ ತೋರಿಸುತ್ತೇನೆ ಎನ್ನುವ ಮೂಲಕ ರಾಜಕೀಯ ವಿರೋಧಿಗಳಿಗೆ ಅವರು ಸವಾಲನ್ನೂ ಹಾಕಿದರು.

Advertisement

ಮಂಡ್ಯದಲ್ಲಿ ಗುರುವಾರ ಚುನಾವಣೆ ನಡೆಯ ಲಿರುವ ಹಿನ್ನೆಲೆಯಲ್ಲಿ ಸುಮಲತಾ ಮಂಗಳವಾರ ಮಂಡ್ಯ ದಲ್ಲಿ ಸ್ವಾಭಿಮಾನ ಸಮ್ಮಿಲನ ಬಹಿರಂಗ ಸಮಾವೇಶ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಇದುವರೆಗೆ ಜೆಡಿಎಸ್‌ ಮುಖಂಡರು ನಡೆಸಿದ್ದ ಎಲ್ಲ ಟೀಕೆಗಳಿಗೂ ಉತ್ತರಿಸಿದರು. ಅಂಬರೀಷ್‌ ಸಮಾಧಿ ಮೇಲೆ ಪುತ್ರನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಅಂತ್ಯಕ್ರಿಯೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಸುಮಲತಾ ಟೀಕಿಸಿದರು.

ಅಂಬರೀಷ್‌ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದದ್ದು ನಾನು ಎಂದು ಪದೇ ಪದೆ ಹೇಳುತ್ತಿದ್ದಾರೆ. ಅದಕ್ಕೂ ಮುನ್ನ ಅಂಬರೀಷ್‌ ಏನಾಗಿದ್ದರು.

ಮಂಡ್ಯದಲ್ಲಿ ಝೀರೋ ಆಗಿದ್ದರಾ? ಅಂಬರೀಷ್‌ ಈ ಮಣ್ಣಿನ ಮಗ. ಮೂರು ಬಾರಿ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಮಂಡ್ಯಕ್ಕೆ ಸೇವೆ ಸಲ್ಲಿಸಿ ಜನರ ಹೃದಯ ಗೆದ್ದಿದ್ದರು. ಅವರ ಪಾರ್ಥಿವ ಶರೀರ ಈ ಮಣ್ಣಿಗೆ ಬರುವುದಕ್ಕೆ ಅಂಬರೀಷ್‌ಗೆ ಯೋಗ್ಯತೆ, ಅರ್ಹತೆ ಇರಲಿಲ್ಲವ ಎಂದು ಪ್ರಶ್ನಿಸಿದರು.

ಕನಗನಮರಡಿ ಸಮೀಪ ಸಂಭವಿಸಿದ ಬಸ್‌ ದುರಂತವನ್ನು ನೆನಪಿಸಿಕೊಂಡ ಸುಮಲತಾ ಅವರು, ಅಂದು ಅಂಬರೀಷ್‌ ಅವರು ಆಸ್ಪತ್ರೆಯಲ್ಲಿದ್ದರು. ಅಂದು ಕನಗನಮರಡಿ ಸಮೀಪ ನಾಲೆ ಯೊಂದಕ್ಕೆ ಬಸ್‌ ಬಿದ್ದು 30 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ದೃಶ್ಯಗಳನ್ನು ನೋಡುತ್ತಲೇ ಅಂಬರೀಷ್‌ ದುಃಖದಲ್ಲಿ ಮುಳುಗಿದ್ದರು. ನಾವು ಪದೇ ಪದೆ ಟಿವಿ ನೋಡಬೇಡಿ ಎಂದರೂ ಕೇಳಲಿಲ್ಲ. ಆ ದುರಂತದ ನೋವನ್ನು ಒಡಲಲ್ಲಿ ತುಂಬಿಕೊಂಡಿರು ವಾಗಲೇ ಅವರ ಹೃದಯವೂ ಒಡೆದು ಹೋಯಿತು ಎಂದು ಅಂದಿನ ಸನ್ನಿವೇಶವನ್ನು ನೆನೆದು ಸಮಾವೇಶದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next