Advertisement
ಈ ಹಿಂದೆ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಯಭೇರಿಗಳಿಸಿದ್ದರು. ಕಳೆದ ಬಾರಿ ಸುಮಲತಾ ಅವರ ಪರವಾಗಿ ಮತ ಪ್ರಚಾರಕ್ಕೆ ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಅವರು ಬಂದಿದ್ದರು. ಜನ ಚುನಾವಣಾ ಪ್ರಚಾರಕ್ಕೆ ಬಂದ ಯಶ್ ಹಾಗೂ ದರ್ಶನ್ ಅವರನ್ನು ನೋಡಲು ಹರಿದು ಬಂದಿದ್ದರು.
Related Articles
Advertisement
“ಕಳೆದ ಚುನಾವಣೆ ಬಳಿಕ ಯಶ್ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ರಾಜಕಾರಣ ಎಂದರೆ ಇಷ್ಟು ಕಹಿ ಇರುತ್ತದೆಯೇ, ಇಷ್ಟೊಂದು ಟೀಕೆ ಇರುತ್ತದೆಯೇ ಎಂದು ಬೇಸರ ಮಾಡಿಕೊಂಡಿದ್ದರು. ನಿಮ್ಮ ಚುನಾವಣೆಯಲ್ಲಿ ಆ ಬಗ್ಗೆ ಗೊತ್ತಾಯ್ತು ಎಂದಿದ್ದರು. ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರು ಬ್ಯುಸಿ ಆಗಿದ್ದಾರೆ. ಅವರಿಂದ ಮತ್ತೆ ಇದನ್ನು ನಿರೀಕ್ಷಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.
“ಯಶ್ ಪ್ರಚಾರಕ್ಕೆ ಬರ್ತೀನಿ ಅಂದ್ರೆ ನನ್ನಷ್ಟು ಸಂತೋಷಪಡುವವರು ಯಾರು ಇಲ್ಲ. ಬರೋಕ್ಕಾಗಲ್ಲ ಅಂದ್ರು ಏನು ಮಾಡೋಕ್ಕಾಗಲ್ಲ. ಕಳೆದ ಬಾರಿ ಕೂಡ ನಾನು ಯಾರನ್ನು ಕೇಳಿ ಬರಲಿಲ್ಲ. ಮನೆ ಮಕ್ಕಳಾಗಿ ಅಂಬರೀಶ್ ಮೇಲಿನ ಅಭಿಮಾನ, ನಮ್ಮ ಕುಟುಂಬದ ಜೊತೆಗಿನ ನಂಟಿನಿಂದ ಅವರೇ ಬಂದ್ರು. ನಾವು ಜೊತೆಗಿರ್ತೀವಿ ಅಂದ್ರು. ಈಗಲೂ ಅಷ್ಟೆ. ಅವ್ರು ಒಪ್ಪಿಗೆ ನನಗೆ ಸಂತೋಷ. ಇಲ್ಲ ಅಂದ್ರು ಪರವಾಗಿಲ್ಲ” ಎಂದಿದ್ದಾರೆ

“ಕಳೆದ ಚುನಾವಣೆಯಲ್ಲಿ ಜೊತೆಗಿದ್ದವರು ಈ ಬಾರಿಯೂ ಜೊತೆಗಿದ್ದಾರೆ. ಕಳೆದ ಬಾರಿ ಅವರದ್ದು ಬರೀ ಬೆಂಬಲ ಅಲ್ಲ ತ್ಯಾಗ ನನಗೋಸ್ಕರ. 20-25 ದಿವಸ ಇದ್ದರು. ದಕ್ಷಿಣ ಭಾರತದ ಇಬ್ಬರೂ ಸ್ಟಾರ್ಸ್ ಒಬ್ಬ ಅಭ್ಯರ್ಥಿ ನಿಂತಿದ್ದು ಸಾಹಸ. ಪದೇ ಪದೆ ಬನ್ನಿ ಎನ್ನುವುದು ಸರೀನಾ ನೀವೇ ಹೇಳಿ. ಯಶ್, ದರ್ಶನ್ ಸಿನಿಮಾ ಮಾಡುವಾಗ ಎಷ್ಟು ಜನ ಅದರ ಮೇಲೆ ಅವಲಂಬಿತರಾಗಿರುತ್ತಾರೆ. ಹತ್ತಿಪ್ಪತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ನಿಮಗೆ ಗೊತ್ತು. ಅದನ್ನೆಲ್ಲಾ ಬಿಟ್ಟು ಬನ್ನಿ ಎನ್ನುವುದು ಸರಿಯಲ್ಲ. ಬಂದರೆ ನನಗೆ ಬಲ” ಎಂದು ಸುಮಲತಾ ಹೇಳಿದ್ದಾರೆ.