Advertisement

ಸುಳ್ಯದ ಶಾಸಕರಿಗೆ ಒಲಿಯಲಿದೆಯೇ ಸಚಿವ ಸ್ಥಾನ ?

11:05 AM Aug 20, 2019 | Team Udayavani |

ಸುಬ್ರಹ್ಮಣ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಆರು ಭಾರಿ ಶಾಸಕರಾಗಿ ಆಯ್ಕೆಯಾಗಿ ಹಿರಿಯ ಶಾಸಕರೆಣಿಸಿಕೊಂಡ ಸುಳ್ಯ ಶಾಸಕ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗಿದೆ. ಶಾಸಕರಿಗೆ ನಾಳೆ ಪ್ರಮಾಣವಚನಕ್ಕೆ ಸಿದ್ದರಾಗುವಂತೆ ಪಕ್ಷದ ಉನ್ನತ ಮೂಲಗಳಿಂದ ಸೂಚನೆ ಬಂದಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Advertisement

ಅಂಗಾರ ಅವರು ಬೆಂಗಳೂರಿನಲ್ಲೆ ಉಳಿದುಕೊಂಡಿದ್ದು ಪ್ರಮಾಣ ವಚನ ಸ್ವೀಕರಿಸುವ ಕುರಿತು ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ .

ಇದರೊಂದಿಗೆ ಜಿಲ್ಲೆಯಿಂದ ಇನ್ನೋರ್ವ ಹಿರಿಯ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮಂತ್ರಿ ಪದವಿ ಒಲಿದು ಬರಲಿದೆ ಎನ್ನಲಾಗುತಿದ್ದು ನಾಳೆ ನಡೆಯುವ ಯಡಿಯೂರಪ್ಪ ನೇತ್ರತ್ವದ ಸಂಪುಟ ರಚನೆಯಲ್ಲಿ ಉಭಯ ಜಿಲ್ಲೆಗಳ ಇಬ್ಬರು ಶಾಸಕರು ಮಂತ್ರಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next