Advertisement

Sultan Bathery; ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ: ಪ್ರವಾಸಿಗರು ಪಾರು

07:32 PM Feb 01, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಕರ್ನಾಟಕದ ಗಡಿ ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿ ಅರಣ್ಯದಲ್ಲಿ ರಸ್ತೆಗಿಳಿದ ಪ್ರವಾಸಿಗರನ್ನು ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದಿದೆ. ಅದೃಷ್ಟವಶಾತ್ ಇಬ್ಬರು ಪ್ರವಾಸಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

Advertisement

ಕೇರಳದ ವೈನಾಡು ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಪ್ರವಾಸಿಗರು ವಾಹನದಿಂದ ಇಳಿದು ಸೆಲ್ಫಿ ಮತ್ತು ಅರಣ್ಯ ವೀಕ್ಷಣೆಗೆಂದು ರಸ್ತೆ ಬದಿ ಬಂದ ವೇಳೆ ಮರದ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಏಕಾಏಕಿ ದಾಳಿಗೆ ಮುಂದಾಗಿದೆ. ಇದರಿಂದ ಭಯಭೀಯತರಾದ ಪ್ರವಾಸಿಗರು ಎದ್ದೋ ಬಿದ್ದೋ ಓದಿದ್ದಾರೆ . ಓಡುವ ಭರದಲ್ಲಿ ಒಬ್ಬಾತ ಕೆಳಗೆ ಬಿದ್ದಿದ್ದು, ಆತನ ಮೇಲೆ ಆನೆ ತುಳಿಯುವ ಪ್ರಯತ್ನ ಮಾಡಿದ್ದು, ಅದೃಷ್ಟವಶಾತ್ ವ್ಯಕ್ತಿ ಯಾವುದೇ ಗಾಯಗಳಾಗದೆ ಪರಾಗಿದ್ದಾನೆ. ಸದ್ಯ ಈ ವಿಡಿಯೋ  ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಪ್ರವಾಸಿಗರು ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳೊಂದಿಗೆ ಸೆಲ್ಫಿ ತೆಗದುಕೊಳ್ಳುವ ಗೀಳಿಗೆ ವಾಹನದಿಂದ ಇಳಿಯುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಅರಣ್ಯಾಧಿಕಾರಿಗಳು ಅರಣ್ಯ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಕಠಿನ ಕ್ರಮ ವಹಿಸಬೇಕೆಂದು ಪರಿಸರ ವಾದಿ ಜೋಸೆಫ್ ಹೂವರ್ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next