Advertisement

ರಸ್ತೆ ಹೊಂಡ ಮುಚ್ಚಿದ ಸುಳ್ಯ ಎಸ್‌.ಐ.!

04:05 AM Aug 09, 2018 | Karthik A |

ಸುಳ್ಯ: ಲಾಠಿ ಹಿಡಿಯುವ ಕೈ ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಅಪರೂಪದ ಘಟನೆ ಸುಳ್ಯದಲ್ಲಿ ನಡೆದಿದೆ. ಮಾಣಿ-ಮೈಸೂರು ರಸ್ತೆಯ ಪೆರಾಜೆ ಬಳಿ ಸುಳ್ಯ ಠಾಣಾ ಎಸ್‌.ಐ. ಮಂಜುನಾಥ ಅವರು ಹೊಂಡ ಮುಚ್ಚುವ ಕೆಲಸಕ್ಕೆ ಸಾಮಗ್ರಿಕೊಂಡು ಹೋಗಿ, ಸ್ವತಃ ಹಾರೆ ಹಿಡಿದುಹೊಂಡ ಮುಚ್ಚಿದ್ದಾರೆ. ಅವರು ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಕಳೆದ ಹಲವು ದಿನಗಳಿಂದ ಮಾಣಿ-ಮೈಸೂರು ಹೆದ್ದಾರಿಯ ಪೆರಾಜೆಯಲ್ಲಿ ರಸ್ತೆ ಮಧ್ಯ ಭಾಗದಲ್ಲಿ ಹೊಂಡವೊಂದು ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿ ಪರಿಣಮಿಸಿತ್ತು. ಪ್ರಯಾಣಿಕರು ಈ ಬಗ್ಗೆ ಅಳಲು ತೋಡಿಕೊಂಡಿದ್ದರು.

Advertisement

ಸ್ವತಃ ದುರಸ್ತಿಗೆ ಮುಂದಾದರು: ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸ್‌.ಐ. ಮಂಜುನಾಥ ಅವರು ಹೊಂಡ ಮುಚ್ಚಲು ಬೇಕಾದ ಸಿಮೆಂಟ್‌, ಇತರ ಸಾಮಗ್ರಿ, ಹಾರೆ, ಪಿಕ್ಕಾಸು ಹಿಡಿದುಕೊಂಡು ಸ್ಥಳಕ್ಕೆ ತೆರಳಿದರು. ಪೊಲೀಸ್‌ ಜೀಪು ಚಾಲಕರ ಜತೆಗೂಡಿ ರಸ್ತೆ ಬದಿಯಲ್ಲಿ ಸ್ವತಃ ಹಾರೆ ಹಿಡಿದು ಹೊಂಡ ಮುಚ್ಚುವ ಕೆಲಸ ನಿರ್ವಹಿಸಿದ ಎಸ್‌.ಐ. ಅವರನ್ನು ಕಂಡು ಸಾರ್ವಜನಿಕರು ನಿಬ್ಬೆರೆಗಾದರು. ಒಂದಿಬ್ಬರು ಅವರಿಗೆ ಸಾಥ್‌ ನೀಡಿದರು. ಎಸ್‌.ಐ. ಅವರ ಸಾಮಾಜಿಕ ಸ್ಪಂದನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next