Advertisement
ಇಲ್ಲಿನ 40ಕ್ಕೂ ಅಧಿಕ ಮನೆಗಳು, ದಲಿತ ಕುಟುಂಬಗಳಿಗೆ ಬೇಸಗೆ ಕಾಲದಲ್ಲಿ ಹೊಳೆಯೇ ರಸ್ತೆಯಾದರೆ, ಮಳೆಗಾಲದಲ್ಲಿ ಸುರಕ್ಷಾ ಬೇಲಿ ಇಲ್ಲದ ಈ ಬಿರುಕು ಬಿಟ್ಟ ಕಿಂಡಿಕಟ್ಟದ ಮೇಲ್ಭಾಗದಲ್ಲಿ ನಡೆದುಕೊಂಡು ಹೊಳೆ ದಾಟುವುದು ಪ್ರತಿ ವರ್ಷದ ಗೋಳು. ಈ ಬಾರಿಯಂತೂ ಸ್ಲಾ ್ಯಬ್ ದಾಟಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ.
ಇಲ್ಲಿನ ಗೌರಿ ಹೊಳೆಗೆ 30 ವರ್ಷದ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದರ ಮೇಲಿನ ಕಿರಿದಾದ ಸ್ಲ್ಯಾಬ್‌ನಲ್ಲಿ ಎರಡೂರಿನ ಜನರು ಸಂಚರಿಸುತ್ತಾರೆ. ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ವಾಹನ ದಾಟಿಸುತ್ತಾರೆ. ಮಳೆಗಾಲದಲ್ಲಿ ಬೇರೆ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸುತ್ತಾಡ ಬೇಕು. ಅನಗುರಿ, ಕೆಡೆಂಜಿ ಮೊಗ್ರು, ಉಡುಕಿರಿ ಮೊದಲಾದ ಪ್ರದೇಶದವರು ಬೆಳ್ಳಾರೆ, ಪೆರುವಾಜೆ, ಕೊಡಿ ಯಾಲ ಭಾಗಕ್ಕೆ ತೆರಳಲು ಸಮೀಪದ ದಾರಿ ಇದಾಗಿದೆ. ಆದರೆ ಸುಸಜ್ಜಿತ ಸೇತುವೆ ಇಲ್ಲದೆ ಇಲ್ಲಿ ಸಂಚಾರ ಸಾಧ್ಯವಾಗುತ್ತಿಲ್ಲ. ಕುಸಿದ ಸ್ಲ್ಯಾಬ್
ಸುರಕ್ಷಾ ಬೇಲಿ ಇಲ್ಲದ ಕಿಂಡಿ ಅಣೆಕಟ್ಟಿನ ಸ್ಲ್ಯಾಬ್ ನಲ್ಲಿ ನಡಿಗೆ ಅಪಾಯಕಾರಿ ಎನಿಸಿದೆ. ಕಳೆದ ಬಾರಿ ಮಧ್ಯಭಾಗದಲ್ಲಿ ಸ್ಲ್ಯಾಬ್ ಬಿರುಕು ಬಿಟ್ಟಿತ್ತು. ದುರಸ್ತಿಗೆ ಕ್ರಮ ಕೈಗೊಳ್ಳದ ಕಾರಣ ಈ ಬಾರಿ ಪೂರ್ತಿ ಕುಸಿದಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಯಲ್ಲಿನ ಈ ಕಿಂಡಿ ಅಣೆಕಟ್ಟಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನ ನಿತ್ಯ ಸಂಚರಿಸುತ್ತಿದ್ದು, ಅಪಾಯ ಎದುರಾಗಿದೆ. ಹೊಸ ಸೇತುವೆ ನಿರ್ಮಾಣದ ತನಕ ಕನಿಷ್ಠ ಪಕ್ಷ ಸ್ಲ್ಯಾಬ್ ದುರಸ್ತಿ ಹಾಗೂ ರಕ್ಷಣಾ ಬೇಲಿ ಅಳವಡಿಸಲೆಬೇಕಿದೆ.
Related Articles
ಇಲ್ಲಿ ಸೇತುವೆ ನಿರ್ಮಾಣದಿಂದ ಉಡುಕಿರಿ ದಲಿತ ಕಾಲನಿಗೆ ಸಂಪರ್ಕ ಸಾಧ್ಯವಾಗುತ್ತದೆ. ಮೂರು ನಾಲ್ಕು ಮಂದಿ ಅಂಗವಿಕಲತೆ ಉಳ್ಳವರು ಇಲ್ಲಿದ್ದು, ಅವರ ಸಂಚಾರಕ್ಕೆ ಅನುಕೂಲವಾಗಲಿದೆ. ರಸ್ತೆ ಮತ್ತು ಸೇತುವೆಯಿಂದ ಕಲ್ಲಪಣೆ, ಕಾಣಿಯೂರು ಭಾಗಕ್ಕೆ ಸಂಪರ್ಕ ಸಾಧ್ಯವಿದೆ. ಈ ಬಗ್ಗೆ ಸ್ಥಳೀಯಾಡಳಿತ, ಶಾಸಕರಿಗೆ, ಪ್ರಧಾನಮಂತ್ರಿಗೆ ಪತ್ರಮುಖೇನ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.
Advertisement
ದುರಸ್ತಿಗೂ ಕ್ರಮ ಕೈಗೊಂಡಿಲ್ಲಎರಡು ಗ್ರಾಮಗಳ ಜನರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಚರಿಸಲು ಅತಿ ಸನಿಹದ ರಸ್ತೆ ಹಾಗೂ ಉಡುಕಿರಿ ಕಾಲನಿ, ಪೆರುವಾಜೆ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ರಸ್ತೆ ಇದಾಗಿದೆ. ದಾಖಲೆಗಳಲ್ಲಿಯೂ ಪ್ರಥಮ ದರ್ಜೆ ಕಾಲೇಜು ಸಂಪರ್ಕ ಕಾಲುದಾರಿ ಎಂದು ನಮೂದಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಮನವಿ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ. ದುರಸ್ತಿಗೂ ಕ್ರಮ ಕೈಗೊಂಡಿಲ್ಲ.
– ರಾಜೇಶ್ ಸಾರಕರೆ
ಸ್ಥಳೀಯ ನಿವಾಸಿ ದುರಸ್ತಿಗೆ ಕ್ರಮಸಾರಕರೆ ಕಿಂಡಿ ಅಣೆಕಟ್ಟು ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ದುರಸ್ತಿ, ನಿರ್ವಹಣೆ ಆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿ ದ್ದರೂ, ಜಿ.ಪಂ. ಮೂಲಕ ಅನುದಾನ ಕ್ರೋಢೀಕರಿಸಿ ಸುರಕ್ಷಾ ಬೇಲಿ ಅಳವಡಿಕೆ ಮತ್ತುಸ್ಲಾ ್ಯಬ್ ದುರಸ್ತಿಗೆ ಆದ್ಯತೆ ನೀಡಲಾಗುವುದು. ಇಲ್ಲಿ ಹೊಸ ಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿಲ್ಲ.
– ಹನುಮಂತ ರಾಯಪ್ಪ ಎಇಇ,
ಪಂ.ರಾಜ್ ಎಂಜಿನಿಯರ್ ಇಲಾಖೆ, ಸುಳ್ಯ ಕಿರಣ್ ಪ್ರಸಾದ್ ಕುಂಡಡ್ಕ