Advertisement
ಜಲ ಪ್ರಳಯದ ಕಾರಣದಿಂದ ಗ್ರಾಮದ ಕಿರೀಟದಂತಿದ್ದ ಎರಡನೆ ಮೊಣ್ಣಂಗೇರಿ ಶಾಲೆ ಕಳೆದ ಆಗಸ್ಟ್‌ನಿಂದ ತೆರೆದೇ ಇಲ್ಲ. ಭೂ ಕುಸಿತದಿಂದ ಆತಂಕಕ್ಕೆ ಒಳಗಾದ ಹೆತ್ತವರು ಊರು ಬಿಟ್ಟು ಪರಿಹಾರ ಕೇಂದ್ರ ಸೇರಿದ ಕಾರಣ ಶಾಲೆಗೆ ಮಕ್ಕಳು ಬಾರದ ಸ್ಥಿತಿ ಉಂಟಾಯಿತು. ಹೀಗಾಗಿ ಮಕ್ಕಳಿಲ್ಲದೆ ಶಾಲೆ ಬಂದ್ ಆಯಿತು. ಈಗಲೂ ಈ ಪ್ರದೇಶ ಸುರಕ್ಷಿತವಲ್ಲದ ಕಾರಣ ಮಕ್ಕಳು ಮತ್ತೆ ಈ ಶಾಲೆಯ ಕದ ತಟ್ಟುವುದು ಬಹುತೇಕ ಅನುಮಾನವೆನಿಸಿದೆ.
ಜಲಪ್ರಳಯ, ಭೂ ಕುಸಿತದ ಕಾರಣ ಹಲವು ತಿಂಗಳುಗಳ ಕಾಲ ಮಕ್ಕಳು ಶಾಲೆಗೆ ಬಾರದಂತಾದರು. ಹೆತ್ತವರು ಇಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಬೇರೆ ಊರಿನ ಸಂಬಂಧಿಕರಲ್ಲಿಂದ, ಇನ್ನು ಕೆಲವರು ಹಾಸ್ಟೆಲ್ಗೆ ಸೇರಿಸಿ ಶಾಲೆಗಳಿಗೆ ಕಳುಹಿಸಿದ್ದಾರೆ. ಹೀಗಾಗಿ ಮೊಣ್ಣಂಗೇರಿ ಶಾಲೆ ಪುನರಾರಂಭಗೊಳ್ಳಬೇಕಿದ್ದರೆ ಹೊಸ ಮಕ್ಕಳು ಸೇರ್ಪಡೆಗೊಳ್ಳಬೇಕಷ್ಟೆ. ಆಗಸ್ಟ್ ಅನಂತರ ಈ ಶಾಲೆಗೆ ಮಕ್ಕಳನ್ನು ಸೇರಿಸುವ ಸ್ಥಿತಿ ಇರಲಿಲ್ಲ ಎನ್ನುತ್ತಾರೆ ಮೊಣ್ಣಂಗೇರಿಯ ಸುನೀತಾ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ದೂರದ ಶಾಲೆಗೆ ಹಾಕಿದ್ದೇವೆ ಎನ್ನುತ್ತಾರೆ ಮೊಣ್ಣಂಗೇರಿಯ ವನಿತಾ.
Related Articles
Advertisement
25ರಿಂದ 30 ಮಕ್ಕಳು!ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 25ರಿಂದ 30 ಮಕ್ಕಳು ಓದುತ್ತಿದ್ದರು. ಸಮೀಪದಲ್ಲಿ ಅಂಗನವಾಡಿಯೂ ಇತ್ತು. ಸದಾ ಮಕ್ಕಳ ಆಟ-ಪಾಠಗಳಿಂದ ನಲಿದಾಡುತ್ತಿದ್ದ ಮೊಣ್ಣಂಗೇರಿಯ ಈ ಕಿರಿಯ ಪ್ರಾಥಮಿಕ ಶಾಲೆ ಪರಿಸರದಲ್ಲಿ ಪ್ರಳಯದ ಬಳಿಕ ನೀರವ ಮೌನ ಆವರಿಸಿದೆ.