Advertisement

Sullia: ವಿದ್ಯುತ್‌ ಶಾಕ್‌ ಹೊಡೆದು ಮಹಿಳೆ ಸಾವು

11:45 PM Oct 08, 2023 | Team Udayavani |

ಸುಳ್ಯ: ಮನೆಗೆ ಅಳವಡಿಸಿದ್ದ ಇನ್ವರ್ಟರ್‌ ಪ್ಲಗ್‌ ತೆಗೆಯುವ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

Advertisement

ಬೊಮ್ಮಾರು ಬಾಬು ಕುಲಾಲ್‌ ಅವರ ಪತ್ನಿ ಲಲಿತಾ (55) ಮೃತರು. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಲಲಿತಾ ಅವರು ಪ್ರತೀ ದಿನ ಮಲಗುವ ಸಮಯದಲ್ಲಿ ಇನ್ವರ್ಟರ್‌ಗೆ ವಿದ್ಯುತ್‌ ಸಂಪರ್ಕಿಸುವ ಪ್ಲಗ್‌ ಅನ್ನು ತೆಗೆದು ಮಲಗುತ್ತಿದ್ದರು. ಶನಿವಾರ ರಾತ್ರಿಯೂ ಪ್ಲಗ್‌ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ ಹೊಡೆದಿದೆ.

ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ, ಅಷ್ಟಾಗಲೇ ಅವರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next