Advertisement
ತಾತ್ಕಾಲಿಕ ಪ್ರತಿಯನ್ನು ಸರಕಾರಕ್ಕೆ ಕಳುಹಿಸುವ ಮೊದಲು ವರದಿಯ ಬದಲಾವಣೆ ಬಗ್ಗೆ ಸದಸ್ಯರು ಉಲ್ಲೇಖೀಸಿದ ಅಂಶಗಳನ್ನು ಅದರಲ್ಲಿ ದಾಖಲಿಸಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಜಾರಿಗೆ ಮೊದಲು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಭೆ ಕರೆದು ಅವರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ ಅಭಿಪ್ರಾಯ ಪಡೆದುಕೊಳ್ಳಬೇಕು. ಅನಂತರವರಷ್ಟೇ ಮಹಾಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ನ.ಪಂ. ಸದಸ್ಯರಾದ ಮುಸ್ತಾಪ ಕೆ.ಎಂ., ಎನ್.ಎ. ರಾಮಚಂದ್ರ, ಉಮ್ಮರ್ ಕೆ.ಎಸ್., ಗಿರೀಶ್ ಕಲ್ಲಗದ್ದೆ ಅವರು ಸಲಹೆ ನೀಡಿದರು.
ಮಹಾಯೋಜನೆಗೆ ಸಂಬಂಧಿಸಿ ನಗರ ಯೋಜಕ ಉಬೈದುಲ್ಲಾ, ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿ, ಈಗ ಕರಡು ಪ್ರತಿಗಷ್ಟೆ ಅನುಮೋದನೆ ನೀಡುವುದು. ಇದು ಅಂತಿಮ ಅಲ್ಲ. ಕರಡು ಪ್ರತಿ ಪರಿಶೀಲನೆ ಆಗಿ 60 ದಿನಗಳ ಕಾಲ ಸಾರ್ವಜನಿಕರು ಆಕ್ಷೇಪಣೆ ದಾಖಲಿಸಲು ಅವಕಾಶ ಇದೆ. ಆ ವೇಳೆ ವರದಿಯಲ್ಲಿ ಸೇರಿಸಲು ಬಾಕಿ ಇರುವ, ಸೇರಿಸಿದ್ದನ್ನು ಕೈ ಬಿಡುವ ಬಗ್ಗೆ ಅಭಿಪ್ರಾಯ ಬಂದಲ್ಲಿ ಪರಿಗಣಿಸಲಾಗುವುದು. ಅನಂತರ ಅಂತಿಮ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ಅನುಷ್ಠಾನವಾಗುತ್ತದೆ ಎಂದರು. ಐದು ವಾರ್ಡ್‌ಗೊಂದು ಸಭೆ
ಮಹಾಯೋಜನೆ ವರದಿಯ ಬಗ್ಗೆ ಐದು ವಾರ್ಡ್ ಜತೆ ಸೇರಿಸಿ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು. ಅಲ್ಲಿ ಸಮರ್ಪಕ ಮಾಹಿತಿ ನೀಡಿ, ಜನರ ಅಭಿಪ್ರಾಯ ಆಲಿಸಬೇಕು. ಇದು 18 ಸದಸ್ಯರ ತೀರ್ಮಾನ ಎಂದೆನಿಸಬಾರದು. ನಗರದ ಎಲ್ಲರ ಅಭಿಮತದಂತೆ ಮಹಾಯೋಜನೆ ಅನುಷ್ಠಾನ ನಿರ್ಧಾರ ಆಗಲಿ ಎಂದು ಸದಸ್ಯರಾದ ಉಮ್ಮರ್, ಎನ್.ಎ. ರಾಮಚಂದ್ರ, ಮುಸ್ತಾಫ, ಪ್ರೇಮಾ ಟೀಚರ್ ಹೇಳಿದರು. ಇದಕ್ಕೆ ನಗರ ಯೋಜಕರು ಪ್ರತಿಕ್ರಿಯಿಸಿ, ಆಕ್ಷೇಪಣ ಅವಧಿಯಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಪಡೆದು ಅದರಂತೆ ವರದಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
Related Articles
ಮಹಾಯೋಜನೆ ಜಾರಿಗೆ ಮೊದಲು ಕನ್ವರ್ಷನ್ ಆದ ಜಮೀನುಗಳಿಗೆ ಸೂಡಾ ನಿಯಮ ಅನ್ವಯ ಆಗಬಾರದು ಎಂದು ಸದಸ್ಯ ಮುಸ್ತಾಫ ಹೇಳಿದರು. ಉತ್ತರಿಸಿದ ನಗರ ಯೋಜಕ ಉಬೈದುಲ್ಲಾ, 2013ರ ಮೊದಲು ಕನ್ವರ್ಷನ್ ಆಗಿ ನೋಂದಣಿ ಆಗಿರುವ ಜಮೀನುಗಳಿಗೆ ಮಂಗಳೂರು ಮಾದರಿಯಲ್ಲಿ ವಿನಾಯಿತಿ ನೀಡುವ ಅವಕಾಶ ಇದೆ. ಅವರು ಜಾಗ ನೀಡುವ ಬದಲು ಶೇ. 15ರಷ್ಟು ಹಣ ಪಾವತಿ ಮಾಡಿದರೆ ಸಾಕಾಗುತ್ತದೆ ಹಾಗೂ ಆ ಜಮೀನಿನ ಹಕ್ಕುದಾರರ ಒಳಗೆ ಪಾಲುಪಟ್ಟಿ ಆಗುವ ಸಂದರ್ಭದಲ್ಲಿಯೂ ಈ ವಿನಾಯಿತಿ ಇರಲಿದೆ. ಆದರೆ ಬೇರೆಯೊಬ್ಬರಿಗೆ ಮಾರಾಟ ಮಾಡುವುದಿದ್ದಲ್ಲಿ ಮಹಾಯೋಜನೆ ನಿಯಮ ಅನ್ವಯವಾಗುತ್ತದೆ ಎಂದರು. ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್, ಮತ್ತಡಿ ಉಪಸ್ಥಿತರಿದ್ದರು.
Advertisement
ರಾಜ್ಯದಲ್ಲಿ ಪ್ರಥಮ ಡ್ರೋನ್ ಸರ್ವೆರಾಜ್ಯದಲ್ಲಿ ಪ್ರಥಮ ಬಾರಿಗೆ ಸುಳ್ಯದ ನಗರದಲ್ಲಿ ಡ್ರೋನ್ ಆಧಾರಿತ ಸರ್ವೆ ನಡೆಸಲಾಗಿದೆ. ನ.ಪಂ. ಎಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಫಾರೆಸ್ಟ್, ಜನವಸತಿ, ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಮಹಾಯೋಜನೆ ಜಾರಿಯಿಂದ ಅನುದಾನ ಹೆಚ್ಚಳ, ನಗರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಉಬೈದುಲ್ಲಾ ಅವರು ಸದಸ್ಯರಲ್ಲಿ ವಿನಂತಿಸಿದರು.