Advertisement
ಸುಳ್ಯದ ಹಿಂದೂಪರ ಸಂಘಟನೆಗಳು ಶುಕ್ರವಾರ ಅಂಗಡಿ, ಮಳಿಗೆಗಳಿಗೆ ಭೇಟಿ ನೀಡಿ ಹರತಾಳಕ್ಕೆ ಕರೆ ನೀಡಿದ್ದವು. ಶನಿವಾರ ಸ್ವಯಂ ಪ್ರೇರಿತರಾಗಿ ಮಳಿಗೆಗಳು ಮುಚ್ಚಿತ್ತು, ಕೆಲವು ತೆರೆದಿದ್ದು, ಹಿಂದೂ ಕಾರ್ಯಕರ್ತರ ಮುಖಂಡರ ವಿನಂತಿ ಮೇರೆಗೆ ಅಂಗಡಿಗಳನ್ನು ಮುಚ್ಚಿದ್ದರು. ಗಾಂಧಿನಗರ ಪ್ರದೇಶದಲ್ಲಿ ಒಂದೆರಡು ಅಂಗಡಿ ಹೊಟೇಲುಗಳು ತೆರೆದಿದ್ದವು.ಸರಕಾರಿ ಬಸ್‌ಗಳು, ಕೆಲವೊಂದು ಖಾಸಗಿ ವಾಹನಗಳು ಎಂದಿನಂತೆ ಓಡಾಟ ನಡೆಸಿದ್ದವು. ಶಾಲಾ ಕಾಲೇಜುಗಳಲ್ಲಿ ತರಗತಿ ನಡೆ ಯಿತು. ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಡಕಾಗಲಿಲ್ಲ.
ನಗರದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳು ಎಲ್ಲರೂ ಪರೀಕ್ಷೆಗೆ ಹಾಜರಾದರು. ಶಾರದಾ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಬಸ್‌ನಲ್ಲಿ ಬರುತ್ತಿದ್ದು, ಅವರಿಗೆ ಕಾಲೇಜಿಗೆ ಬರಲು ತೊಡಕಾದಾಗ ಮನೆ ಸನಿಹದವರೊಬ್ಬರು ಸಹಾಯದಿಂದ ಬೈಕ್‌ನಲ್ಲಿ ಕಾಲೇಜಿಗೆ ಬಂದು ಪರೀಕ್ಷೆ ಬರೆದರು ಎಂದು ತಿಳಿದುಬಂದಿದೆ. ಹರತಾಳದ ಹಿನ್ನೆಲೆಯಲ್ಲಿ ಗ್ರಾಮಾಂತ ರದ ವಿದ್ಯಾರ್ಥಿಗಳು ಶಾಲೆಗೆ ಬರಲಿಲ್ಲ. ಶಾಲಾ-ಕಾಲೇಜಿನಲ್ಲಿ ತರಗತಿಗಳನ್ನು ಮೊಟಕುಗೊಳಿಸಿ ಬೆಳಗ್ಗೆ 11ರ ವೇಳೆಗೆ ಮಕ್ಕಳನ್ನು ಮನೆಗೆ ಕಳುಹಿಸಿಕೊಟ್ಟರು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಹರತಾಳದ ಮುನ್ಸೂಚನೆ ಇದ್ದುದರಿಂದ ಗ್ರಾಮಾಂತರದಿಂದ ನಗರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆ ಆಗಿತ್ತು.
Related Articles
ಬೆಳ್ಳಾರೆ ಪೇಟೆ ಸಂಪೂರ್ಣ ಬಂದ್ ಆಗಿತ್ತು. ಇಂದು ಅಲ್ಲಿ ವಾರದ ಸಂತೆ ಎಂದಿನಂತೆ ನಡೆಯಿತು. ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು.
Advertisement
ಗುತ್ತಿಗಾರು ಪೇಟೆ, ಪಂಜದಲ್ಲಿ ಅಂಗಡಿ ಮುಂಗಟ್ಟುಗಳು ವ್ಯವಹಾರವನ್ನು ಸ್ಥಗಿತ ಗೊಳಿಸಿದ್ದವು. ಜಾಲೂÕರು, ಕಲ್ಲುಗುಂಡಿ, ಸಂಪಾಜೆ, ಅರಂತೋಡು, ಮರ್ಕಂಜ ಹೀಗೆ ಗ್ರಾಮಾಂತರ ಪೇಟೆಗಳಲ್ಲಿ ಎಂದಿನಂತೆ ವ್ಯವಹಾರ ನಡೆಯಿತು.ಯಾತ್ರಾರ್ಥಿಗಳು ನಿರಾಳ
ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಹರತಾಳ ನಡೆಯದ ಕಾರಣ ಯಾತ್ರಾ ರ್ಥಿಗಳು ನಿರಾಳವಾಗಿದ್ದರು. ರಾಜ್ಯ ಸಾರಿಗೆ ಬಸ್ ಓಡಾಟ ನಡೆಸಿದವು. ಪ್ರಯಾಣಿಕರು ವಿರಳವಾದ ಕಾರಣ ಖಾಲಿ ಖಾಲಿಯಾಗಿ ಓಡಾಟ ನಡೆಸಿದವು. ಸುಳ್ಯ-ಪುತ್ತೂರು ರಾಜ್ಯ ಸಾರಿಗೆ ಬಸ್‌ಗೆ ಪುತ್ತೂರು ಸಮೀಪ ಬಸ್‌ಗೆ ಕಲ್ಲುತೂರಾಟ ನಡೆಸಿದ ಕಾರಣ ಆ ಮೂರು ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿದವು.ಕೇರಳ ಸಾರಿಗೆ ಬಸ್‌ಗಳು ಕಾಸರಗೋಡು, ಕಾಂಞಂಗಾಡ್‌ನಿಂದ ಸುಳ್ಯಕ್ಕೆ ಬರಲಿಲ್ಲ. ಇದರಿಂದ ಅಂತಾರಾಜ್ಯ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಬಿಗು ಬಂದೋಬಸ್ತು
ಬಿಗು ಬಂದೋಬಸ್ತ್ಗಾಗಿ ಚಿಕ್ಕಮಂಗಳೂರು ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡವನ್ನು ನಿಯೋಜಿಸಲಾಗಿತ್ತು. ಪಿಎಸ್‌ಐ-8, ಎಎಸ್‌ಐ-11, ಕೆಎಸ್‌ಆರ್‌ಪಿ-60, ನಾಗರಿಕ ಪೊಲೀಸ್-60, ಸಂಚಾರಿ ಘಟಕ-15 ಇದರ ಜತೆಗೆ ಸುಳ್ಯ ಗೃಹರಕ್ಷಕ ದಳ ಸೇರಿಕೊಂಡು ನಗರದಲ್ಲಿ ಬಿಗು ಬಂದೋಬಸ್ತು ನಡೆಸಿದರು.