Advertisement

Sullia ಸರಣಿ ಅಪಘಾತ; ಮಹಿಳೆ ಆಸ್ಪತ್ರೆಗೆ

12:26 AM Feb 12, 2024 | Team Udayavani |

ಸುಳ್ಯ: ಎರಡು ಕಾರು ಹಾಗೂ ಬೈಕ್‌ ಹಾಗೂ ಸ್ಕೂಟಿಯ ಮಧ್ಯೆ ಸರಣಿ ಅಪಘಾತ ಸಂಭವಿಸಿ, ಬೈಕಿನಲ್ಲಿದ್ದ ಮಹಿಳೆ ಗಾಯಗೊಂಡ ಘಟನೆ ಜಾಲೂÕರು ಗ್ರಾಮದ ಬೊಳುಬೈಲಿನಲ್ಲಿ ಫೆ. 11ರಂದು ಸಂಜೆ ಸಂಭವಿಸಿದೆ.

Advertisement

ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುನಿಲ್‌ ಕುಮಾರ್‌ ಮೋಂಟಡ್ಕ ಅವರು ಜಾಲ್ಸೂರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವೇಳೆ ಮುಂಭಾಗದಲ್ಲಿ ಹೋಗುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದು, ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದು, ರಸ್ತೆಯಲ್ಲಿ ತೆರಳುತ್ತಿದ್ದ ಇನ್ನೊಂದು ಬೈಕ್‌ ಗೆ ಢಿಕ್ಕಿ ಹೊಡೆದಿದ್ದು, ಬೈಕ್‌ ನಲ್ಲಿದ್ದ ದಂಪತಿಗಳ ಪೈಕಿ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ.

ತಕ್ಷಣ ಸ್ಥಳೀಯರು ಗಾಯಾಳು ಮಹಿಳೆಯನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next