Advertisement
ರಬ್ಬರ್ ಗಿಡದಲ್ಲಿ ಇರುವ ಕಂಬಳಿ ಹುಳದ ಗಾತ್ರ ದೊಡ್ಡದಾಗಿದೆ. ಅಡಿಕೆ ಮರದಲ್ಲಿ ಇರುವ ಹುಳದ ಗಾತ್ರ ಕಿರಿದಾಗಿದೆ. ಮಳೆಗಾಲದ ಆರಂಭದಲ್ಲಿ ಮನೆ ಅಂಗಳ, ಮರ, ಗಿಡಗಳಲ್ಲಿ ಕಾಣಿಸಿಕೊಂಡ ಈ ಹುಳಗಳು ಅನಂತರ ಅಡಿಕೆ, ರಬ್ಬರ್ ಮರಗಳನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಂಡಿವೆ.
Related Articles
ಜಿಎಸ್‌ಟಿ ಗೊಂದಲದಿಂದ ಅಡಿಕೆ, ರಬ್ಬರ್ ಮಾರುಕಟ್ಟೆ ತಟಸ್ಥವಾಗಿದೆ. ಈಗಿರುವ ಧಾರಣೆ ಇಳಿಸಲು ಬೆಳೆಗಾರರು ಬಿಡುವುದಿಲ್ಲ. ಬೆಳೆ ಏರಿ ಸಲು ವರ್ತಕರು ಮುಂದಾಗುತ್ತಿಲ್ಲ. ಇದರ ಮಧ್ಯೆ ಕೃಷಿಕ ರಿಗೆ ಪ್ರತಿ ವರ್ಷವೂ ಇಂತಹ ವಿಚಿತ್ರ ಸಮಸ್ಯೆ ಗಳು ಕಾಡುತ್ತಿವೆ. ಗಿಡಗಳಿಗೆ ಹಾನಿ ಮಾಡು ತ್ತದೆಯೋ, ಇಲ್ಲವೂ ಎಂಬ ಖಾತರಿ ಇಲ್ಲದ ಕಾರಣ ಕಂಬಳಿ ಹುಳ ಯಾಕೆ ಕಾಣಿಸಿಕೊಂಡಿರಬಹುದು ಎಂಬ ಚರ್ಚೆ ಕೃಷಿಕರೊಳಗೆ ನಡೆದಿದೆ.
Advertisement
ಇಲಾಖೆ ಮೇಲೆ ಭರವಸೆ ಇಲ್ಲಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮಾಮೂಲಿ. ಈ ಹಿಂದೆ ಸುಳ್ಯದಲ್ಲಿ ಅಡಿಕೆಗೆ ಕಾಣಿಸಿಕೊಂಡ ಹಳದಿ ರೋಗ, ಕಾಂಡ ಹುಳ ರೋಗದ ಸಂದರ್ಭವೂ ಪರಿಶೀಲನೆ ನಡೆಸಿದ್ದರೂ ಅದರ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇಲಾಖೆ ಈ ತನಕವೂ ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಇಲಾಖಾಧಿಕಾರಿಗಳು ಅಭಯ ನೀಡಿ ದರೂ ಕೃಷಿಕರ ಭಯಕ್ಕೆ ಮುಕ್ತಿ ಸಿಗುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲಿ ಈ ಹುಳ ಕಾಣಿಸಿಕೊಂಡಿರುವ ಬಗ್ಗೆ ವಿಚಾರಿಸಿದರೆ, ಈ ತನಕ ಕೃಷಿಕರಿಂದ ಮಾಹಿತಿ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸುಳ್ಯದಲ್ಲಿ ಅಧಿಕ
ಕಂಬಳಿ ಹುಳ ಕಾಣಿಸಿಕೊಂಡಿದ್ದು ಸುಳ್ಯ ಭಾಗ ದಲ್ಲಿ ಅಧಿಕ. ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಕಾಣಿಸಿಕೊಂಡಿವೆ. ಅಡಿಕೆ ತೋಟಕ್ಕೆ ಹೋಲಿಸಿದರೆ ಸುಳ್ಯದಲ್ಲಿ ಅಧಿಕ. ಮದ್ದು ಸಿಂಪಡಿಸಿದರೂ ಅಡಿಕೆ ಮರದಿಂದ ಹುಳ ಕದಲುತ್ತಿಲ್ಲ. ಅಡಿಕೆ ಎಳೆ ಕಾಯಿ ಬಲಿಯುವ ಕಾಲ ವಾಗಿದ್ದು, ಅದರ ಮೇಲೆ ಪರಿಣಾಮ ಬೀರ ಬಹುದೇ ಎಂಬ ಅನುಮಾನ ಕೃಷಿಕ ರದ್ದು. ರಬ್ಬರ್ ಟ್ಯಾಪಿಂಗ್ ಈಗಷ್ಟೆ ಆರಂಭಗೊಂಡಿ ರುವುದು ಬೆಳೆಗಾರರ ತಲ್ಲಣಕ್ಕೆ ಕಾರಣ. ಹೇರಳ ವಾಗಿ ಕಾಣಿಸಿಕೊಂಡಿರುವ ಈ ಹುಳ ದಿಂದ ರಬ್ಬರ್, ಅಡಿಕೆ ಗಿಡಕ್ಕೆ ತೊಂದರೆ ಉಂಟಾಗ ಬಹುದೇ ಎಂಬ ಆತಂಕಕ್ಕೆ ಪರಿಹಾರ ಸಿಗಬೇಕಿದೆ. ಪರಿಶೀಲಿಸಿ ಕ್ರಮ
ಇದು ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುವ ಹುಳ. ಸಾಧಾರಣವಾಗಿ ಚಿಗುರನ್ನು ತಿನ್ನುತ್ತವೆ. ಬೇರೇನೂ ಸಮಸ್ಯೆ ಯಾಗದು. ಈ ಹುಳಗಳಿಂದ ಅಡಿಕೆ, ರಬ್ಬರ್ ಗಿಡಗಳಿಗೆ ಹಾನಿ ಉಂಟಾ ಗಿದೆಯೇ ಎಂದು ಪರಿಶೀಲಿಸಲಾಗುವುದು. ಹುಳ ಬಾಧೆ ಹೆಚ್ಚಾ ದರೆ, 2 ಮಿಲಿ ಕ್ಲೊರೊಪೈರಿಪಾಸ್ ಅನ್ನು ಎರಡು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
– ಹೊಳೆಬಸಪ್ಪ ಕುಂಬಾರ, ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕೆ ಇಲಾಖೆ ಪುತ್ತೂರು ಪೂರ್ತಿ ಆವರಿಸಿದೆ
ಸುಳ್ಯದ ಹಲವು ಅಡಿಕೆ, ರಬ್ಬರ್ ತೋಟಗಳಲ್ಲಿ ಕಂಬಳಿ ಹುಳ ಕಾಣಿಸಿಕೊಂಡಿದೆ. ಮರ ಪೂರ್ತಿ ಹಬ್ಬಿರುವುದರಿಂದ ಕೃಷಿಕ ರಲ್ಲಿ ಗೊಂದಲ ಮೂಡಿದೆ. ಅಡಿಕೆ, ರಬ್ಬರ್‌ಗೆ ಸಮಸ್ಯೆ ಇದೆಯೇ ಎಂಬ ಬಗ್ಗೆ ಉತ್ತರ ಸಿಕ್ಕಿದರೆ ಕೃಷಿಕರ ಆತಂಕ ದೂರವಾದೀತು.
-ಎಂ.ಡಿ. ವಿಜಯ ಕುಮಾರ್, ಸಂಚಾಲಕರು, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ, ಸುಳ್ಯ – ಕಿರಣ್ ಪ್ರಸಾದ್ ಕುಂಡಡ್ಕ