Advertisement

ಸುಳ್ಯ: ತುಳು ಸಮ್ಮೇಳನ ಪೂರ್ವಭಾವಿ ಸಭೆ 

05:14 PM Apr 01, 2018 | Team Udayavani |

ಸುಳ್ಯ : ತುಡರ್‌ ತುಳುಕೂಟ, ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲು ಉದ್ದೇಶಿಸಿರುವ ತುಳು ಸಾಹಿತ್ಯ ಸಮ್ಮೇಳನದ ಕುರಿತಂತೆ ಪೂರ್ವಭಾವಿ ಸಭೆಯು ಜ್ಯೋತಿ ಸರ್ಕಲ್‌ನ ಪ್ರಜ್ಞಾ ಎಜುಕೇಶನ್‌ ಸೆಂಟರ್‌ನಲ್ಲಿ ನಡೆಯಿತು.

Advertisement

ಅಕ್ಟೋಬರ್‌ನಲ್ಲಿ ನಡೆಯಲಿರುವ ಶಾರದೋತ್ಸವದ ಸಂದರ್ಭ ಒಂದು ದಿನ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಇಲಾಖೆಗಳ ಸಹಯೋಗ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು. ಅ. 16 ರಂದು ಸಮ್ಮೇಳನ ಆಯೋಜನೆ, ಮುಂದಿನ ಸಭೆಗಳಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮಾಡುವ ಕುರಿತಂತೆ ನಿರ್ಧರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಇದೇ ಸಂದರ್ಭ ಸಮ್ಮೇಳನದ ಸ್ವಾಗತ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಡಾ| ಹರಪ್ರಸಾದ್‌ ತುದಿಯಡ್ಕ, ಅಧ್ಯಕ್ಷರಾಗಿ ಗೋಕುಲ್‌ದಾಸ್‌, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್‌ ಎಂ.ಜೆ., ಕೋಶಾಧಿಕಾರಿಯಾಗಿ ಜೆ.ಕೆ. ರೈ ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಮ್ಮೇಳನದ ರೂಪುರೇಷೆಯ ಕುರಿತು ತುಳು ಅಕಾಡೆಮಿ ಮಾಜಿ ಸದಸ್ಯರಾದ ದುರ್ಗಾಕುಮಾರ್‌ ನಾಯರ್‌ಕೆರೆ, ಕೆ.ಟಿ.
ವಿಶ್ವನಾಥ, ಗೋಕುಲ್‌ದಾಸ್‌, ಬಾಪು ಸಾಹೇಬ್‌ ಮೊದಲಾದವರು ಸಲಹೆ ನೀಡಿದರು.

ದಯಾನಂದ ಆಳ್ವ ಜಟ್ಟಿಪಳ್ಳ, ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜು ಪಂಡಿತ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂತೋಷ್‌ ಕುಮಾರ್‌ ರೈ, ಎಂ.ಕೆ. ಸತೀಶ್‌, ರಾಧಾಕೃಷ್ಣ ರೈ ಬೂಡು, ಚಿದಾನಂದ ಹಳೆಗೇಟು, ಜಯರಾಮ ಶೆಟ್ಟಿ, ಕುಸುಮಾಧರ, ರಘುನಾಥ ಜಟ್ಟಿಪಳ್ಳ, ಚಂದ್ರಾಕ್ಷಿ ಜೆ. ರೈ, ಭಾಗೀಶ್‌ ಕೆ.ಟಿ., ಭವಾನಿಶಂಕರ ಕಲ್ಮಡ್ಕ, ಶಿವಪ್ರಸಾದ್‌ ಕೇರ್ಪಳ, ರಮೇಶ್‌ ನೀರಬಿದಿರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next