Advertisement
ಪೊಲೀಸರು ದಾಳಿ ನಡೆಸುವ ವೇಳೆ ಸ್ವಿಪ್ಟ್ ಕಾರಿನಲ್ಲಿ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿರುವುದು ಕಂಡುಬಂದಿದೆ. ಕಾರಿನ ಸಮೀಪದಲ್ಲೇ ತೆರೆದ ಕೊಟ್ಟಿಗೆಯಲ್ಲಿ 2 ಜಾನುವಾರುಗಳು ಕಂಡುಬಂದಿದ್ದು ಅದನ್ನು ಮೂವರು ವ್ಯಕ್ತಿಗಳು ಬಿಚ್ಚಲು ಯತ್ನಿಸುತ್ತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. Advertisement
Sullia: ಅಕ್ರಮ ದನ ಸಾಗಾಟ ವೇಳೆ ಪೊಲೀಸ್ ದಾಳಿ
08:26 PM Oct 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.