Advertisement

Kappettu: ಮರಳು ಅಕ್ರಮ ಸಾಗಾಟ; ವಶಕ್ಕೆ

09:01 PM Oct 03, 2024 | Team Udayavani |

ಮಲ್ಪೆ: ಗುರುವಾರ ಮಧ್ಯಾಹ್ನ ಕಿದಿಯೂರು ಗ್ರಾಮದ ಕಪ್ಪೆಟ್ಟು ನೇತ್ರಜ್ಯೋತಿ ಕಾಲೇಜಿನ ಸಮೀಪ ಮಲ್ಪೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮರಳು ಅಕ್ರಮ ಸಾಗಾಟ ಪತ್ತೆಯಾಗಿದೆ.

Advertisement

ಮಂಗಳೂರು ಕಡೆಯಿಂದ ಸಂತೆಕಟ್ಟೆ ಕಡೆಗೆ ಅನುಮಾನಸ್ಪದವಾಗಿ ಟಿಪ್ಪರ್‌ ಅನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಸಂಶಯಗೊಂಡು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ವಾಹನ ಚಾಲಕ ಕುಂದಾಪುರ ಹೆಂಗವಳ್ಳಿ ಗ್ರಾಮದ ಪುನೀತ್‌ ಎನ್ನಲಾಗಿದ್ದು, ಮರಳನ್ನು ಮೂಲ್ಕಿಯ ಸಂಕಲಕರಿಯ ಪಟ್ಟೆಕ್ರಾಸ್‌ ಎಂಬಲ್ಲಿರುವ ಸಿನೋಜ್‌ ಅವರ ದಕ್ಕೆಯಿಂದ ತಂದಿರುವುದಾಗಿ ತಿಳಿಸಿದ್ದಾನೆ. ಸುಮಾರು 3 ಯುನಿಟ್‌ನಷ್ಟು ಮರಳು ಕಳವು ಮಾಡಿ ಟಿಪ್ಪರ್‌ನಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಲಾಗುತ್ತಿತ್ತು. ಇದರ ಮೌಲ್ಯ 12 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.