Advertisement

ಸುಳ್ಯ: ಸ್ವಯಂ ಜಾಗೃತಿಯತ್ತ ಜನರ ಚಿತ್ತ

10:16 PM Mar 29, 2020 | Sriram |

ಸುಳ್ಯ: ಲಾಕ್‌ಡೌನ್‌ ವ್ಯವಸ್ಥೆಗೆ ಜನತೆ ಒಗ್ಗಿಕೊಳ್ಳಲಾರಂಭಿಸಿದ್ದು, ತಾಲೂಕಿನಲ್ಲಿ ರವಿವಾರ ಸಂಪೂರ್ಣ ಬಂದ್‌ ವಾತಾವರಣ ಕಂಡು ಬಂತು. ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

ಬದಲಾವಣೆಗೆ ಒಗ್ಗುತ್ತಿರುವ ಜನರು ಮನೆಯೊಳಗೆ ಕಾಲ ಕಳೆಯುವಿಕೆಗೆ ಒತ್ತು ನೀಡುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ ಲಾಠಿ ಪ್ರಯೋಗ ಮಾಡಿ ಗುಂಪು ಚದುರಿಸುವ ಪ್ರಯತ್ನ ನಡೆದಿತ್ತು. ಆದರೆ ಆ ಪ್ರಮಾಣ ಈಗ ಇಳಿಮುಖ ಆಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನ, ವಾಹನ ಓಡಾಟ ಸ್ಥಗಿತವಾದೆ.

ರಸ್ತೆ ಬಂದ್‌
ಅಜ್ಜಾವರ ಗ್ರಾಮದ ದೊಡ್ಡೇರಿ ಪ್ರದೇಶದ ಮುರುಳ್ಯದಿಂದ ದೊಡ್ಡೇರಿಗೆ ಹೋಗುವ ರಸ್ತೆಯಲ್ಲಿ ಮರ ಕಡಿದು ಹಾಕಿ ರಸ್ತೆ ಬಂದ್‌ ಮಾಡಿದ್ದು, ರಸ್ತೆಗೆ ಕಲ್ಲುಗಳನ್ನು ಇಡಲಾಗಿದೆ. “ಕೋವಿಡ್‌-19 ಹರಡುತ್ತಿರುವುದರಿಂದ ನಾಗರಿಕರ ಆರೋಗ್ಯ ರಕ್ಷಣೆಗಾಗಿ ನಮ್ಮ ಊರಿನ ವಾಹನ ಸಂಪರ್ಕ ರಸ್ತೆ ಬಂದ್‌ ಮಾಡಲಾಗಿದೆ. ಎಲ್ಲರು ಸಹಕರಿಸಬೇಕಾಗಿ ವಿನಂತಿ’ ಎಂದು ನಾಮಫಲಕ ಅಳವಡಿಸಲಾಗಿದೆ.

ತೂಗು ಸೇತುವೆಗೂ ಬೇಲಿ
ಓಡಬಾಯಿ ಮೂಲಕ ದೊಡ್ಡೇರಿ ಸಂಪರ್ಕಿಸುವ ತೂಗುಸೇತುವೆಯ ಪ್ರವೇಶ ದ್ವಾರದಲ್ಲಿ ತಡೆ ಬೇಲಿ ನಿರ್ಮಿಸಿ ಬೇರೆ ಗ್ರಾಮದ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಮಾಸ್ಕ್ ವಿತರಣೆ
ನಗರ ಪಂಚಾಯತ್‌ ಸದಸ್ಯೆ ಶಿಲ್ಪಾ ಸುದೇವ್‌ ಅವರು ನ.ಪಂ. 15 ಮಂದಿ ಪೌರ ಕಾರ್ಮಿಕರಿಗೆ ಬಟ್ಟೆಯ ಮಾಸ್ಕ್ಗಳನ್ನು ವಿತರಿಸಿದರು. ನ.ಪಂ. ಎಂಜಿನಿಯರ್‌ ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

ಕ್ಲಿನಿಕ್‌ಗಳ ಬಂದ್‌: ತೊಂದರೆ
ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಕ್ಲಿನಿಕ್‌ಗಳು ಬಂದ್‌ ಆಗಿರುವ ಪರಿಣಾಮ ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜ್ವರ, ರಕ್ತದೊತ್ತಡ ಹೆಚ್ಚಳ ಹೀಗೆ ವಿವಿಧ ಕಾಯಿಲೆಗಳಿಗೆ ಹೆಚ್ಚಾಗಿ ಸನಿಹದ ಕ್ಲಿನಿಕ್‌ ಅನ್ನು ಆಶ್ರಯಿಸುತ್ತಿದ್ದ ಜನರಿಗೆ ಈಗ ವೈದ್ಯರ ಸಂಪರ್ಕ ಸಾಧ್ಯವಾಗುತ್ತಿಲ್ಲ. ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ದೊಡ್ಡ ಆಸ್ಪತ್ರೆಗಳು ಮಾತ್ರ ತೆರೆದಿದ್ದು, ಸಣ್ಣ ಪುಟ್ಟ ಕ್ಲಿನಿಕ್‌ ಕೆಲವು ದಿನಗಳಿಂದ ಬಂದ್‌ ಆಗಿವೆ.

ಪೆರುವಾಜೆಯಲ್ಲಿ ಪ್ರಾರ್ಥನೆ
ಕೋವಿಡ್-19 ಸೋಂಕು ನಿರ್ಮೂಲನಕ್ಕಾಗಿ ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವ ಸ್ಥಾನ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಟಾರ್‌ ಪೂಜಾ ಕಾರ್ಯ ನೆರವೇರಿಸಿ ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿ ಸಿದರು. ಈ ಸಂದರ್ಭದಲ್ಲಿ ದೇವ ಸ್ಥಾನದ ಆಡಳಿತಾಧಿಕಾರಿ ಪದ್ಮನಾಭ ಕೆ ನೆಟ್ಟಾರು, ವ್ಯವಸ್ಥಾಪಕ ವಸಂತ ಆಚಾರ್ಯ ಉಪಸ್ಥಿತರಿದ್ದರು.

ಅಗತ್ಯ ಔಷಧಕ್ಕೆ ಪಾಸ್‌ ಸೌಲಭ್ಯ
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಔಷಧಗಳನ್ನು ತರಲು ಮೆಡಿಕಲ್‌ ಅಥವಾ ಆಸ್ಪತ್ರೆಗೆ ತೆರಳಲು ಪಾಸ್‌ ವ್ಯವಸ್ಥೆ ಒದಗಿಸಲಾಗಿದೆ. ತಾಲೂಕು ಕಚೇರಿಯಲ್ಲಿ ನಿಗದಿತ ನಮೂನೆ ಅರ್ಜಿ ಭರ್ತಿ ಮಾಡಿ ಪಾಸ್‌ ಪಡೆದುಕೊಳ್ಳಬಹುದು. ಆನ್‌ಲೈನ್‌ ಮೂಲಕವು ಅರ್ಜಿ ಭರ್ತಿ ಮಾಡಿ ಪಾಸ್‌ ಪಡೆಯಲು ಅವಕಾಶ ಇದೆ ಎಂದು ತಹಶೀಲ್ದಾರ್‌ ಅನಂತಶಂಕರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next