Advertisement
ದ.ಕ. ಕೊಡಗು ಗಡಿಭಾಗದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಸುಳ್ಯ ತಾಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿದೆ ಈ ಪ್ರದೇಶ. ಈ ಎರಡು ಕಂದಾಯ ಊರುಗಳು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಸೇತುವೆ, ರಸ್ತೆ, ಕಾಲನಿಗಳ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳನ್ನು ಹೊಂದುವಲ್ಲಿ ಹಿಂದೆ ಬಿದ್ದಿದೆ.
ತೀರಾ ಹದೆಗೆಟ್ಟ ಈ ಊರಿಗೆ ಸರಕಾರಿ ಬಸ್ಸುಗಳು ಬರಲು ಒಪ್ಪುವುದಿಲ್ಲ, ದಿನಕ್ಕೆ ಒಂದೆರಡು ಬಸ್ಸುಗಳು ಬರುತ್ತವೆ. ಉಳಿದಂತೆ ಎಲ್ಲರು ಖಾಸಗಿ ವಾಹನಗಳನ್ನೆ ಅವಲಂಬಿ ಸಿಕೊಂಡಿದ್ದಾರೆ. ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಸೇತುವೆಗಳಿಲ್ಲದೆ ಮಳೆಗಾಲದಲ್ಲಿ ಸಂಕಷ್ಟ ಪಡುತ್ತಿರುತ್ತಾರೆ. ಮಕ್ಕಳು, ಇಳಿ ವಯಸ್ಸಿನವರು, ಮಹಿಳೆಯರು ಜೀವ ಅಭದ್ರತೆಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ಊರಿನ ಮಂದಿ ತಮ್ಮೂರಿಗೆ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ.
Related Articles
Advertisement
ಕಷ್ಟದ ಜೀವನಈ ಭಾಗದಲ್ಲಿ ಬಹುತೇಕ ದಿನಗಳಲ್ಲಿ ಮೊಬೈಲ್ ಸಂಪರ್ಕ ಸೇವೆ ಇರುವುದಿಲ್ಲ. ವಿದ್ಯುತ್ ಸರಬರಾಜು ಇರುವುದಿಲ್ಲ. ಪ್ರತಿನಿತ್ಯ ಕಾಡು ಪ್ರಾಣಿಗಳು ಕೃಷಿ ತೋಟಗಳಿಗೆ ಧಾವಿಸಿ ಬಂದು ಕೃಷಿ ಫಸಲು ನಾಶ ಪಡಿಸುತ್ತಿದೆ. ಕೃಷಿಗೆ ರೋಗಬಾಧೆ
ಕೃಷಿಕರು ಕೃಷಿ ನಡೆಸಲು ಸಾಧ್ಯವಾಗದೆ ಸ್ಥಿತಿ ಒಂದೆಡೆಯಾದರೆ ಮತ್ತೂಂದು ಕಡೆ ಬೆಳೆಗಳಿಗೆ ಬಾಧಿಸುವ ವಿವಿಧ ರೋಗಗಳು, ಅಡಿಕೆಗೆ ಹಸಿರು ಕೊಳೆ ರೋಗ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇಲ್ಲಿ ಜೀವನ ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮಕ್ಕಳ ಕೊರತೆ
ಕಡಮಕಲ್ಲು ಎಂಬಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರಕಾರಿ ಶಾಲೆ ಕಾರ್ಯಚರಿಸುತ್ತಿತ್ತು. ಇದು ಕಡಮಕಲ್ಲು ಭಾಗದ ಜನತೆಗೆ ಉಪಯುಕ್ತವಾಗಿತ್ತು. ಮೂಲಸೌಕರ್ಯವಿಲ್ಲದೆ ಇರುವ ಈ ಶಾಲೆ ಈಗ ಪಾಳು ಬಿದ್ದಿದೆ. ಹಳೆ ಕಟ್ಟಡ ಕೆಡವದೆ ಉಳಿಸಿಕೊಳ್ಳಲಾಗಿದೆ. ಪಕ್ಕದ ಹೊಸ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಇಲ್ಲಿರುವ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿದೆ. ಇಲ್ಲಿ ವಾಸವಿರುವ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳನ್ನು ಇತರೆಡೆಗಳ ಶಾಲೆಗೆ ಸೇರಿಸಿರುವ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳ ಕೊರತೆ ಕಂಡುಬಂದಿದೆ. ಒಟ್ಟಾರೆ ಬದುಕು
ವಿದ್ಯುತ್ ಯಾವತ್ತೂ ಇರುವುದಿಲ್ಲ. ಸಣ್ಣ ಗುಡುಗು ಆದರೂ ಮೊಬೈಲ್ ನೆಟ್‌ವರ್ಕ್ ಹೋಗುತ್ತದೆ. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ತತ್ ಕ್ಷಣಕ್ಕೆ ಏನೂ ಮಾಡಲಾಗುತ್ತಿಲ್ಲ. ಒಟ್ಟಾರೆ ನಮ್ಮದೊಂದು ಬದುಕು ಅಷ್ಟೆ.
– ತೇಜಾವತಿ ಕಲ್ಮಕಾರು ಗ್ರಹಿಣಿ ಬಾಲಕೃಷ್ಣ ಭೀಮಗುಳಿ