ಸುಳ್ಯ: ತರಕಾರಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಎ. 4ರಂದು ಬೆಳಕಿಗೆ ಬಂದಿದೆ.
ಸುಳ್ಯದ ಪದ್ಮನಾಭ (50) ಮೃತಪಟ್ಟವರು.
ಪದ್ಮನಾಭ ಅವರು ಅಣ್ಣ ಶೇಖರ ಪೂಜಾರಿ ಅವರ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎ.3ರಿಂದ ತರಕಾರಿ ಅಂಗಡಿಯನ್ನು ಬಾಗಿಲು ಹಾಕಿಕೊಂಡು ತಮ್ಮ ಬಾಡಿಗೆ ಮನೆಗೆ ಹೋಗಿದ್ದು, ಎ.4ರಂದು ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯಲು ಬಾರದೇ ಇದ್ದುದರಿಂದ ಶೇಖರ ಅವರು ಪದ್ಮನಾಭ ಅವರ ಮೊಬೈಲ್‌ಗೆ ಕರೆ ಮಾಡಿದರು. ಕರೆ ಸ್ವೀಕರಿಸದ ಕಾರಣ ಮನೆಯ ಹತ್ತಿರ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು.
ಕಿಟಕಿಯಿಂದ ನೋಡಿದಾಗ ಪದ್ಮನಾಭ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿದ್ದರು. ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದರು.