Advertisement
ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಸೋಣಂಗೇರಿ-ಪೈಚಾರು ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆ ಭಾಗ ಎತ್ತರಿಸಲ್ಪಟ್ಟು, ಅಂಗನವಾಡಿ ತಗ್ಗಿರುವ ಪ್ರದೇಶವಾಯಿತು. ಜತೆಗೆ ಪಕ್ಕದ ಜಾಗವನ್ನೂ ಸಮತಟ್ಟು ಮಾಡಲಾಗಿತ್ತು. ಇದರಿಂದ ಹೊಸದಾಗಿ ಸುಸಜ್ಜಿತವಾಗಿಯೇ ಇದ್ದ ಅಂಗನವಾಡಿ ಮಳೆಗಾಲ ಬಹುತೇಕ ಮುಳುಗಡೆಯಾಯಿತು.
Related Articles
ಮಳೆಗಾಲದಲ್ಲಿ ನೀರಿನಿಂದ ಮುಳುಗುವ ಅಂಗನವಾಡಿ ಕಟ್ಟಡದ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲೇ ಕಷ್ಟವಾಗುವ ಕಾರಣ ಇಲಾಖೆ, ತಾಲೂಕು ಪಂಚಾಯತ್ ವತಿಯಿಂದ ಬದಲಿ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಅದಂತೆ ಸೋಣಂಗೇರಿ ಸರಕಾರಿ ಪ್ರಾಥಮಿಕ ಶಾಲಾ ಬಳಿಯಲ್ಲೆ ಅಂಗನವಾಡಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಅದರಂತೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನೂ ನೆರವೇರಿಸಲಾಗಿದೆ.
Advertisement
ತಾ.ಪಂ. ನ ಅನಿರ್ಬಂಧಿತ .2.5 ಲಕ್ಷ ರೂ. ಹಾಗೂ ಎನ್‌ಆರ್‌ಇಜಿ ಅನುದಾನ 8 ಲಕ್ಷ ರೂ. ನಲ್ಲಿ ಹೊಸ ಕಟ್ಟಡ ನಿರ್ಮಾಣ ಆಗಲಿದೆ. ಜತೆಗೆ ಹೆಚ್ಚುವರಿ ಅನುದಾನಕ್ಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಮಳೆಗಾಲ್ಲಿ ನೀರಲ್ಲಿ ಮುಳುಗಿ, ಕಟ್ಟಡಕ್ಕೆ ಹಾನಿಯಾಗಬಹುದು ಎಂಬ ಆತಂಕ ಸ್ಥಳೀಯರದ್ದು, ಅದಕ್ಕಾಗಿ ಹೊಸ ಕಟ್ಟಡ ನಿರ್ಮಾಣದ ಬೇಡಿಕೆ ವ್ಯಕ್ತವಾಗಿತ್ತು. ಪ್ರಸ್ತುತ ಅಂಗನವಾಡಿ ಕಾರ್ಯಾಚರಿಸುತ್ತಿರುವ ಶಾಲೆಯಲ್ಲಿ ಇಕ್ಕಟ್ಟಿನಿಂದ ಕೆಲಸ ನಿರ್ವಹಿಸಬೇಕಾಗಿದೆ.
ಸೋಣಂಗೇರಿ ಅಂಗನವಾಡಿಗೆ ಸೋಣಂಗೇರಿ ಶಾಲಾ ಬಳಿಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಗುದ್ದಲಿ ಪೂಜೆ ನಡೆಸಲಾಗಿದೆ. ಸರಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.– ಶೈಲಜಾ, ಸಿಡಿಪಿಒ ಸುಳ್ಯ