ಸುಳ್ಯ : ನಗರ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಸುಳ್ಯ ನಗರ ದಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಅಲ್ಲದೆ ವಿದ್ಯುತ್‌ನ ಕಡಿತದಿಂದಾಗಿ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗುತ್ತದೆ ಎಂದು ನಗರ ಪಂಚಾಯತ್ ತಿಳಿಸಿದೆ.
ಸಾರ್ವಜನಿಕರು ನಳ್ಳಿ ನೀರನ್ನು ತೋಟಕ್ಕೆ ಬಿಡುವುದು, ವಾಹನ ತೊಳೆ ಯುವುದು, ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸು ತ್ತಿರುವುದು ಕಂಡು ಬಂದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು. ಸಾರ್ವಜನಿಕರು ನೀರನ್ನು ಮಿತ ವಾಗಿ ಬಳಸಿ ನೀರನ್ನು ಶೇಖರಿಸಿಡುವಂತೆ ತಿಳಿಸಲಾಗಿದೆ. 2016-17ನೇ ಸಾಲಿನ ಕಟ್ಟಡ ತೆರಿಗೆ, ನೀರಿನ ಬಿಲ್ಲು ಬಾಕಿ ಇರುವವರು ಈ ತಿಂಗಳ ಅಂತ್ಯದೊಳಗೆ ಪಾವತಿಸಬೇಕು.
ಸುಳ್ಯ ನಗರ ವ್ಯಾಪ್ತಿಯಲ್ಲಿ ಅನಧಿಧಿಕೃತವಾಗಿ ಬಡಾವಣೆ ಮಾಡುವುದು, ಸ್ಥಳಗಳಲ್ಲಿ ಮಣ್ಣು ತೆಗೆಯುವುದು, ಜಾಗ ಸಮತಟ್ಟು ಮಾಡುವುದು ಕಂಡುಬರುತ್ತದೆ. ಈ ರೀತಿ ಕಚೇರಿಯಿಂದ ಪರವಾನಿಗೆ ಪಡೆಯದೆ ಕಾಮಗಾರಿ ಮಾಡುತ್ತಿರುವುದು ಕಾನೂನು ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಇನ್ನು ಮುಂದೆ ಇಂತಹ ಕಾಮಗಾರಿಯನ್ನು ನ.ಪಂ.ನಿಂದ ಅನುಮತಿ ಪಡೆದು ಮಾಡಬೇಕು.
2017-18ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಆಸ್ತಿತೆರಿಗೆ ಪಾವತಿ ಜಾರಿಗೆ ತರಲು ಉದ್ದೇಶಿಸಿದ್ದು, ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಖಾತೆ ಮತ್ತು (ಭೂ ಪರಿವರ್ತಿತ) ಖಾಲಿ ನಿವೇಶನ ಅಥವಾ ಜಮೀನು ಹೊಂದಿರುವ ಖಾತೆದಾರರು ಕಡ್ಡಾಯವಾಗಿ ಅವಶ್ಯ ದಾಖಲೆಗಳನ್ನು ಸಲ್ಲಿಸಿ ನಮೂನೆ-3 ಯಲ್ಲಿ ಖಾತಾ ಪ್ರತಿಯನ್ನು ಪಡೆಯುವಂತೆ ತಿಳಿಸಲಾಗಿದೆ.
ವಿಳಂಬವಾದಲ್ಲಿ ದಂಡನೆಯೊಂದಿಗೆ ವಸೂಲಿ ಪಡೆಯಲಾಗುವುದು. ತಪ್ಪಿದಲ್ಲಿ ನಿಯಮಾನುಸಾರ ಜಾಗದ ಮಾಲಕರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನ.ಪಂ. ಪ್ರಕಟನೆಯಲ್ಲಿ ತಿಳಿಸಿದೆ.