Advertisement

 ಸುಳ್ಯ: ಉದ್ಯೋಗಸ್ಥ ಮಹಿಳೆಯರ ವಸತಿಗೃಹ ಉದ್ಘಾಟನೆ 

02:35 PM Oct 28, 2017 | |

ಸುಳ್ಯ: ಪುರುಷಪ್ರಧಾನ ಸಮಾಜದಲ್ಲಿ ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಸದೃಢರಾದಾಗ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿ.ಪಂ. ಮಂಗಳೂರು, ಮಹಿಳಾ ಸಮಾಜ ಸುಳ್ಯ ಇವುಗಳ ಸಹ
ಯೋಗದೊಂದಿಗೆ ಶುಕ್ರವಾರ ಸುಳ್ಯದಲ್ಲಿ ಜರಗಿದ ಉದ್ಯೋಗಸ್ಥ ಮಹಿಳೆಯರ ನೂತನ ವಸತಿಗೃಹ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಹಿಳೆ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸದೃಡರಾಗಿದ್ದಾರೆ. ಇದೇ ಕಾರಣಕ್ಕೆ ಮಹಿಳೆ ಎಂದು ಶೋಷಣೆ ಮುಕ್ತಳಾಗಿದ್ದಾಳೆ ಎನ್ನಲಾಗದು. ಅನೇಕ ದುರ್ಬಲ ವರ್ಗದ ಮಹಿಳೆಯರು ಇಂದೂ ಶೋಷಣೆಯಾಗುತ್ತಿದ್ದಾರೆ. ಮಹಿಳಾ ಮೀಸಲಾತಿಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರ ಸಹಿತ ಸ್ವಲ್ಪ ಮಂದಿ ಮಾತ್ರ ಸದೃಢರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರಾಮಾಣಿಕ ಕರ್ತವ್ಯ
ಮಹಿಳೆಯರು ಮರ್ಯಾದೆಗೆ ಅಂಜುವುದರಿಂದಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅವಕಾಶ
ಸಿಕ್ಕರೆ ಹೆಣ್ಣು ಮಕ್ಕಳು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಸಾಧನೆ ಮಾಡುತ್ತಾರೆ ಎನ್ನುವುದು ಸತ್ಯ ಎಂದರು.

ಶಾಸಕ ಎಸ್‌. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಜಿ.ಪಂ. ಸದಸ್ಯರಾದ ಎಸ್‌.ಎನ್‌. ಮನ್ಮಥ, ಹರೀಶ್‌ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಸುಬ್ರಹ್ಮಣ್ಯ
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಗರ ಪಂಚಾಯತ್‌ ಸದಸ್ಯ ಗಿರೀಶ್‌ ಕಲ್ಲುಗದ್ದೆ , ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸರಸ್ವತಿ, ಮಹಿಳಾ ಸಮಾಜದ ಕಾರ್ಯದರ್ಶಿ ಇಂದಿರಾ ರೈ, ಜಯಲಕ್ಷ್ಮೀ ಮಧುಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಮ್ಮಾನ
ಕಾರ್ಯಕ್ರಮದಲ್ಲಿ ಹರಿಣಿ ಸದಾಶಿವ ದಂಪತಿ ಅವರನ್ನು ಸಮ್ಮಾನಿಸಲಾಯಿತು. ಪುಷ್ಪಾರಾಧಾಕೃಷ್ಣ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಮಹಿಳಾ ಸಮಾಜದ ಅಧ್ಯಕ್ಷೆ ಹರಿಣಿ ಸದಾಶಿವ ಸ್ವಾಗತಿಸಿ, ಗೌರವಾಧ್ಯಕ್ಷೆ ನೇತ್ರಾವತಿ ಪಡ್ಡಂಬೈಲು ಪ್ರಾಸ್ತಾವಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next