Advertisement

ಸುಳ್ಯ: ವೇದಾಧ್ಯಯನ ಶಿಬಿರದಲ್ಲಿ ಬಾಲಕಿ !

03:22 PM May 01, 2017 | |

ಸುಳ್ಯ: ಇಲ್ಲಿನ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿ ಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ವೇದಾಧ್ಯಯನ ಶಿಬಿರ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು, ಇಲ್ಲಿ ಮಕ್ಕಳು ಸೇರ್ಪಡೆಗೆ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತಿದೆ. ಈ ಅಚ್ಚರಿಯ ಜತೆಗೆ ಇನ್ನೊಂದು ಸೇರ್ಪಡೆಯಾಗಿದೆ. ಅದೆಂದರೆ ಬಾಲಕಿಯೊಬ್ಬಳನ್ನು ವೇದಾಧ್ಯಯನಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಕೇರಳದ ವಿದ್ಯುತ್‌ ನಿಗಮದಲ್ಲಿ ಎಂಜಿನಿಯರ್‌ ಆಗಿರುವ ಕಾಸರಗೋಡು ಅಡೂರು ಸತ್ಯನಾರಾಯಣ ಶರ್ಮ ಅವರ ಮಗಳು 10 ವರ್ಷದ ಬಾಲಕಿ ಅಸೀಮಾ ವೇದ ಶಿಬಿರದಲ್ಲಿ ಕಲಿಯುತ್ತಿದ್ದಾಳೆ. ಆಕೆ ಸ್ಪುಟವಾಗಿ ಮಂತ್ರೋಚ್ಚಾರಣೆ ಮಾಡುತ್ತಿದ್ದಾಳೆ. ಈ ಹುಡುಗಿಗೆ ಅವಳ ತಂದೆ ಉಪನಯನ ಮಾಡಿದ್ದು, ಈಗ ವೇದಾಧ್ಯಯನ ಶಿಬಿರಕ್ಕೆ ಸೇರಿಸಿದ್ದಾರೆ. ಹುಡುಗಿಯರಿಗೆ ಉಪನಯನ ವಾಗಲಿ ವೇದಾಧ್ಯಯನವಾಗಲಿ ನಿಷಿದ್ಧ ಎಂದು ಎಲ್ಲೂ ಹೇಳಿಲ್ಲ ಎನ್ನುತ್ತಾರೆ ಸತ್ಯನಾರಾಯಣ ಶರ್ಮ ಅವರು. ಮುಂದಿನ ವರ್ಷ ಬಾಲಕಿಯರಿಗೂ ವೇದಾ ಧ್ಯಯನಕ್ಕೆ ಅವಕಾಶ ನೀಡುವ ಉದ್ದೇಶವಿದೆ ಎಂದು ಕೇಶವ ಕೃಪಾಪ್ರತಿಷ್ಠಾನದ ಅಧ್ಯಕ್ಷ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next