ಸುಳ್ಯ : ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಕೊಡಿಮರ ಮತ್ತು ಬಿಂಬಮರ ಸಮರ್ಪಣೆ ಕಾರ್ಯಕ್ರಮ ಡಿ. 9ರಂದು ನಡೆಯಲಿದ್ದು, ಆ ಪ್ರಯುಕ್ತ ಉಬರಡ್ಕ ಗ್ರಾಮದಿಂದ ತರಲಾದ ಬಿಂಬಮರಕ್ಕೆ ಶನಿವಾರ ಸುಳ್ಯ ನಗರದಲ್ಲಿ ಸ್ವಾಗತ ಕೋರಿ ಬಳಿಕ ಮೆರವಣಿಗೆ ನಡೆಯಿತು.
ಅರ್ಚಕ ಹರೀಶ್ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಬಳಿಕ ಗಾಂಧಿನಗರದ ಬಳಿ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಅರೆಭಾಷೆ ಅಕಾಡೆಮಿ ಸದಸ್ಯ ಸುರೇಶ್ ಅಮೈ, ನ.ಪಂ. ಸದಸ್ಯ ರಮಾನಂದ ರೈ, ಕಲ್ಕುಡ ದೈವಸ್ಥಾನದ ತಿಮ್ಮಪ್ಪ ನಾವೂರು, ಜತ್ತಪ್ಪ ಗೌಡ, ಹರೀಶ್ ಬಂಟ್ವಾಳ್, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತದ ಯಜಮಾನ ಶ್ರೀಧರ ಪೂಜಾರಿ, ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಎನ್ ಎಸ್‌ಡಿ ವಿಟ್ಠಲದಾಸ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ನೂಜಾಡಿ, ಉಪಾಧ್ಯಕ್ಷ ಸೋಮನಾಥ ಪೂಜಾರಿ, ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಭಾರ ಅಧ್ಯಕ್ಷ ಜಯಂತ ನಡುಬೈಲು, ಕಾರ್ಯದರ್ಶಿಗಳಾದ ರವಿ ಪೂಜಾರಿ ಚಿಲಿಂಬಿ, ಸುಧಾಕರ ಸುವರ್ಣ ತಿಂಗಳಾಡಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ, ಶ್ರೀ ಧೂಮಾವತಿ ಕರಸೇವಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ, ಗೆಜ್ಜೆಗಿರಿ ಕ್ಷೇತ್ರದ ರವೀಂದ್ರ ಸುವರ್ಣ, ಸುಳ್ಯ ತಾಲೂಕು ಯುವವಾಹಿನಿ ಘಟಕದ ಅಧ್ಯಕ್ಷ ಚಂದ್ರಶೇಖರ ಹೈದಂಗೂರು, ಕಾರ್ಯದರ್ಶಿ ಶಿವಪ್ರಕಾಶ್, ಸುಂದರ ಪೂಜಾರಿ, ನಾರಾಯಣ ಪೂಜಾರಿ, ಶ್ರೀನಿವಾಸ ಪೂಜಾರಿ, ಪೂವಪ್ಪ ಪೂಜಾರಿ ಮುಕ್ಕೂರು, ಸುನೀಲ್, ಬಿಲ್ಲವ ಮಹಿಳಾ ಘಟಕದ ಶಶಿಕಲಾ ನೀರಬಿದಿರೆ ಉಪಸ್ಥಿತರಿದ್ದರು. ಸರ್ವ ಸಮುದಾಯಗಳ ಭಕ್ತರು, ಸಾಮಾಜಿಕ, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.