Advertisement

Sullia: ಜೂಜಾಟ; ಪೊಲೀಸರ ದಾಳಿ

11:32 PM Dec 04, 2023 | Team Udayavani |

ಸುಳ್ಯ: ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

Advertisement

ಸುಳ್ಯ ಎಸೈ ರವಿವಾರ ಸಂಜೆ ಸಿಬಂದಿಗಳೊಂದಿಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರದ ಕೆರೆಮೂಲೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದಾಗ 8 ಜನರು ಗುಂಪು ಸೇರಿಕೊಂಡು ಇಸ್ಪೀಟ್‌ ಎಲೆಗಳನ್ನು ಎರಡು ಕಡೆ ಹಾಕುತ್ತಿದ್ದು, ಆ ಸಮಯ ಉಳಿದವರು ಹಣವನ್ನು ಪಣವನ್ನಾಗಿಟ್ಟು ಜೂಜಾಟ ಆಡುತ್ತಿರುವುದು ಕಂಡು ಬಂದಿದೆ.

ದಾಳಿ ವೇಳೆ ಒಟ್ಟು 8,470 ರೂಪಾಯಿ ಹಣ ಹಾಗೂ ಇಸ್ಪೀಟ್‌ ಎಲೆಗಳನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಳ್ಳಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next