Advertisement

ಸುಳ್ಯ: ಡಾ|ಕುರುಂಜಿ ವೆಂಕಟ್ರಮಣ ಗೌಡ

03:14 PM Dec 10, 2017 | |

ಸುಳ್ಯ: ಕೆವಿಜಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಸುಳ್ಯದ ‘ಅಮರಶಿಲ್ಪಿ’ ಡಾ| ಕುರುಂಜಿ ವೆಂಕಟ್ರಮಣ ಗೌಡ ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಶನಿವಾರ ಸುಳ್ಯ ಬಸ್‌ನಿಲ್ದಾಣ ಬಳಿ ಭೂಮಿಪೂಜೆ ಜರಗಿತು. ಈ ಸಂದರ್ಭ ಸ್ಮಾರಕ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಸ್‌. ಅಂಗಾರ, ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisement

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ನ.ಪಂ. ಸದಸ್ಯೆ ಪ್ರೇಮಾ ಟೀಚರ್‌, ಎಪಿಎಂಸಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ಬಿಜೆಪಿ ಮುಖಂಡರಾದ ಎ.ವಿ. ತೀರ್ಥರಾಮ, ವೆಂಕಟ್‌ ವಳಲಂಬೆ, ವಿನಯ್‌ ಕಂದಡ್ಕ, ಶೀನಪ್ಪ ಬಯಂಬು, ಚಂದ್ರಕೋಲ್ಚಾರ್‌, ಆರೆಸ್ಸೆಸ್‌ ವಿಭಾಗ ಕಾರ್ಯವಾಹ ನ. ಸೀತಾರಾಮ, ಗೌಡ ಯುವ ಸೇವಾ ಸಂಘದ ಮುಖಂಡರಾದ ದಿನೇಶ್‌ ಮಡಪ್ಪಾಡಿ, ಶ್ರೀಕಾಂತ್‌ ಮಾವಿನಕಟ್ಟೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ ಪೇರಾಲು, ಪ್ರಮುಖರಾದ ಕೃಷ್ಣ ಪ್ರಸಾದ್‌ಮಡ್ತಿಲ, ಪಡ್ಡಂಬೈಲು ವೆಂಕಟ್ರಮಣ ಗೌಡ, ಗಂಗಾಧರ ಪಿ.ಎಸ್‌., ಕೆವಿಜಿ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ| ಜ್ಞಾನೇಶ್‌, ಕೆವಿಜಿ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ| ಲೀಲಾಧರ್‌, ಸುಳ್ಯಪೊಲೀಸ್‌ ಠಾಣಾಧಿಕಾರಿ ಮಂಜುನಾಥ್‌ ಮೊದಲಾದವರು ಉಪಸ್ಥಿತರಿದ್ದರು.

ಸಮಾಲೋಚನ ಸಭೆ
ಭೂಮಿಪೂಜೆ ಬಳಿಕ ಸುಳ್ಯ ಸಿ.ಎ. ಬ್ಯಾಂಕ್‌ ಸಭಾಂಗಣದಲ್ಲಿ ಸಮಾಲೋಚನ ಸಭೆ ನಡೆಯಿತು. ಡಾ| ಕೆ. ವಿ. ಚಿದಾನಂದ ಅವರು ಮಾತನಾಡಿ, ಪ್ರತಿಮೆ ನಿರ್ಮಾಣದ ಕನಸು ತಡವಾಗಿಯಾದರೂ ಈಡೇರಿಸುವ ಉದ್ದೇಶಕ್ಕೆ ಕಾಲಕೂಡಿ ಬಂದು ಚಾಲನೆ ದೊರೆತಿರುವುದು ಸಂತಸದಾಯಕ. ಪಕ್ಷಾತೀತ ಮತ್ತು ಧರ್ಮಾತೀತವಾಗಿ ಎಲ್ಲರ ಸಹಭಾಗಿತ್ವದೊಂದಿಗೆ ಪ್ರತಿಮೆ ಕನಸು ಸಾಕಾರಗೊಳ್ಳಬೇಕು ಎಂದರು.

ತಾ.ಪಂ. ಅಧ್ಯಕ್ಷ ಚನಿಯಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಉಪಸ್ಥಿತರಿದ್ದರು. ನ. ಸೀತಾರಾಮ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿವಿಧ ಪಕ್ಷಗಳ ಮತ್ತು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಸಹಕಾರ ಗುಣ ಅಗತ್ಯ 
ಬಹುದಿನಗಳ ಮತ್ತು ಬಹುಜನರ ಬೇಡಿಕೆಯಾಗಿರುವ ಪ್ರತಿಮೆ ನಿರ್ಮಾಣ ಸಾರ್ವಜನಿಕ ಪ್ರತಿಮೆಯಾಗಿ ರೂಪುಗೊಳ್ಳಬೇಕು. ಇದರಿಂದ ಗೌರವ ಹೆಚ್ಚಾಗುತ್ತದೆ. ಪ್ರತಿಮೆ ನಿರ್ಮಾಣಕ್ಕೆ ಸಹಕಾರವಾಗಿ ಅನುದಾನ ನೀಡುವ ಸಹಕಾರದ ಗುಣ ಅಗತ್ಯ ಎಂದು ಶಾಸಕ ಅಂಗಾರ ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next