Advertisement

ಕೊಕ್ಕೊ ಗುಣಮಟ್ಟದ ಬಗ್ಗೆ ಕಾಳಜಿ ಅಗತ್ಯ: ಕೈಂತಜೆ 

12:02 PM Dec 16, 2018 | Team Udayavani |

ಸುಳ್ಯ : ಕೊಕ್ಕೊ ಕಚ್ಚಾ ವಸ್ತುವಿಗೆ ಮೌಲ್ಯವರ್ಧನೆ ಮಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೂರೈಕೆ ಮಾಡಲು ಬೇಕಾದ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಸಂಶೋಧನ ಸಂಸ್ಥೆಗಳು ಪ್ರಥಮ ಆದ್ಯತೆ ನೀಡಬೇಕು ಎಂದು ಚಾಕಲೆಟ್‌ ಉದ್ಯಮಿ ರಾಜರಾಜೇಶ್ವರಿ ಕೈಂತಜೆ ಹೇಳಿದ್ದಾರೆ.

Advertisement

ವಿಟ್ಲ ಕೇಂದ್ರೀಯ ತೋಟದ ಬೆಳೆ ಗಳ ಸಂಶೋಧನ ಪ್ರಾದೇಶಿಕ ಸಂಸ್ಥೆ ನೇತೃತ್ವದಲ್ಲಿ ಕೊಚ್ಚಿನ್‌ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಕಾಂತಮಂಗಲ ಗ್ರೀನ್‌ಲ್ಯಾಂಡ್ ಎಸ್ಟೇಟ್‌ನಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕೊಕ್ಕೊ ವಿಚಾರ ಸಂಕಿರಣ, ಉತ್ಪಾದನೆ ಮತ್ತು ಸಂಸ್ಕರಣೆ ತಾಂತ್ರಿಕತೆ ಬಗ್ಗೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಕೊಕ್ಕೊದಿಂದ ಉತ್ಪಾದನೆ ಮಾಡುವ ಚಾಕಲೇಟ್‌ ಉತ್ಪನ್ನಗಳಿಗೆ ಹಾಗೂ ಬೇರೆ ರಾಷ್ಟ್ರಗಳ ಉತ್ಪನ್ನಗಳ ಗುಣಮಟ್ಟಕ್ಕೆ ಅಜಗಜಾಂತರ ಇದೆ. ಹೊರ ರಾಷ್ಟ್ರಗಳ ಗುಣಮಟ್ಟಕ್ಕೆ ಹೋಲಿಸಿದರೆ, ನಮ್ಮಲ್ಲಿ ಉತ್ಪಾದಿತ ಚಾಕಲೇಟುಗಳ ಗುಣಮಟ್ಟ ತೀರಾ ಕಡಿಮೆ ಇದೆ. ಇದಕ್ಕೆ ಮೌಲ್ಯವರ್ಧನೆಗೆ ಒತ್ತು ನೀಡದಿರುವುದೇ ಮೂಲ ಕಾರಣ ಎಂದು ಅವರು ವಿವರಿಸಿದರು.

ಭಾರತದಲ್ಲಿ ಕೊಕ್ಕೊ ಕೃಷಿ ಇದೆ ಎಂದರೆ ಹೊರ ರಾಷ್ಟ್ರಗಳು ನಂಬುತ್ತಿಲ್ಲ. ಪರಿಸ್ಥಿತಿ ಕೊಕ್ಕೊ ಬೆಳೆಯುವ ರಾಷ್ಟ್ರಗಳ ಭೂಪಟದಲ್ಲಿಯೂ ಭಾರತದ ಹೆಸರು ಕಾಣುತ್ತಿಲ್ಲ. ಇಲ್ಲಿ ಕೊಕ್ಕೊ ಬೆಳೆಯುವವರು ಬಡವರು, ತಿನ್ನುವವರು ಶ್ರೀಮಂತರು ಎಂಬ ಸ್ಥಿತಿ ಇದೆ ಎಂದು ನುಡಿದರು. ಕೊಕ್ಕೊ ಕೊಯ್ದು ನೇರವಾಗಿ ಮಾರಾಟ ಮಾಡುವುದು ಸರಿಯಾದ ಕ್ರಮ ಅಲ್ಲ. ಕೊಯಿಲು ಆದ 4-5 ದಿನಗಳ ಬಳಿಕ ಅದನ್ನು ಪೂರೈಕೆ ಮಾಡಬೇಕು. ನಿರ್ದಿಷ್ಟ ಬಣ್ಣ ದಾಟಿದರೆ ಅದರಿಂದ ಉತ್ಪಾದನೆಗೊಳ್ಳುವ ಉತ್ಪನ್ನಗಳು ಕೂಡ ಉತ್ತಮವಾಗಿರುವುದಿಲ್ಲ. ಕಟಾವು, ಮಾರಾಟದ ಬಗ್ಗೆ ಇಲ್ಲಿನ ಕೃಷಿಕರಿಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು. ಪ್ರಗತಿಪರ ಕೃಷಿಕ, ನಿವೃತ್ತ ಪ್ರಾಂಶುಪಾಲ ಪಡ್ಡಂಬೈಲು ವೆಂಕಟರಮಣ ಗೌಡ ಮಾತನಾಡಿ, ಸಂಶೋಧನೆಗಳು ಸರಿಯಾದ ದಿಕ್ಕಿನಲ್ಲಿ ಸಾಗಿ ಬೆಳೆಯ ಬಗ್ಗೆ ಮಾಹಿತಿ ನೀಡಬೇಕು. 

ಪ್ರದರ್ಶನ, ಉಪನ್ಯಾಸ 
ಹೆಚ್ಚು ಇಳುವರಿ ಕೊಡುವ ಕೊಕ್ಕೊ ತಳಿಗಳು ಮತ್ತು ನರ್ಸರಿ ತಂತ್ರಗಾರಿಕೆ, ಕೊಕ್ಕೊ ಬೆಳೆಯ ಮೂಲಭೂತ ಹಾಗೂ ಮುಂದುವರಿದ ಉತ್ಪಾದನಾ ತಂತ್ರಜ್ಞಾನಗಳು, ಕೊಕ್ಕೊ ಬೆಳೆಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ, ಸಂಸ್ಕರಣೆ ಮತ್ತು ಚಾಕೊಲೇಟ್‌ ತಯಾರಿಕೆ ವಿಧಾನದ ಬಗ್ಗೆ ವಿಜ್ಞಾನಿಗಳು ಉಪನ್ಯಾಸ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next