Advertisement
ಶೀಟು ಅಳವಡಿಸಬೇಕುಬೆಳ್ಳಾರೆಯಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಡದ ಉದ್ಘಾಟನೆ ಕುರಿತು ವಿಷಯ ಪ್ರಸ್ತಾವವಾದ ಸಂದರ್ಭ ಎಪಿಎಂಸಿ ಸದಸ್ಯ ನವೀನ್ ಸಾರಕರೆ, ನಾಮನಿರ್ದೇಶಿತ ಸದಸ್ಯ ಅನಿಲ್ ರೈ, ಅಲ್ಲಿ ಕಾಮಗಾರಿ ಇನ್ನೂ ಬಾಕಿ ಇದೆ. ಕಟ್ಟಡದ ಮೇಲಂಸ್ತಿಗೆ ನಿರ್ಮಿಸಿದ ಮೆಟ್ಟಿಲಿನ ಮೇಲ್ಭಾಗದಲ್ಲಿ ನಿರ್ಮಿಸಿದ ಗೋಡೆಗೆ ಛಾವಣಿ ಇಲ್ಲದೆ ಮಳೆ ನೀರು ಪ್ರಾಂಗಣಕ್ಕೆ ಹರಿಯುತ್ತಿದೆ. ಅಲ್ಲಿ ಸಿಮೆಂಟ್ ಶೀಟು ಅಳವಡಿಸಬೇಕು ಎಂದರು. ಕಾಮಗಾರಿ ಪೂರ್ಣವಾಗದೇ ಕಾರ್ಯಾರಂಭಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಎಂಜಿನಿಯರ್, ಕಾರ್ಯದರ್ಶಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಎಪಿಎಂಸಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿ ಸಮರ್ಪಕವಾಗಿ ಆಗದೇ ಇದ್ದರೆ ಅಂತಹವರಿಗೆ ಮತ್ತೆ ಟೆಂಡರ್ ಕೊಡುವುದು ಏಕೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಎಪಿಎಂಸಿ ಕಾಮಗಾರಿಗಳಿಗೆ ಟೆಂಡರ್ ಹಾಕುವವರಿಲ್ಲ ಎಂದು ಕಾರ್ಯದರ್ಶಿ ಮಾಹಿತಿ ನೀಡಿದ ಸಂದರ್ಭ, ಯಾಕೆ ಹಾಕುವುದಿಲ್ಲ, ಅದಕ್ಕೆ ಬೇಕಾದಷ್ಟು ಮಂದಿ ಇದ್ದಾರೆ. ಮುಂದಿನ ಬಾರಿ ಹಾಕಿಸೋಣ ಎಂದು ಅನಿಲ್ ರೈ ಮರು ಉತ್ತರಿಸಿದರು. ಸದಸ್ಯ ಸಂತೋಷ್ ಜಾಕೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಸದಸ್ಯರಾದ ಮೋನಪ್ಪ ಗೌಡ, ಎಂ. ಬಾಲಕೃಷ್ಣ, ಜಯಲಕ್ಷ್ಮೀ, ವಿನಯ ಕುಮಾರ್ ಎಂ.ಟಿ., ಸುಂದರ, ಜಯಪ್ರಕಾಶ್ ಕೆ., ದೀಪಕ್, ಗಣೇಶ್ ಕೆ.ಎಸ್., ಎಸ್. ಆದಂ ಕುಂಞಿ, ನಾಮ ನಿರ್ದೇಶಿತ ಸದಸ್ಯ ಪುರುಷೋತ್ತಮ ಎನ್., ಶಶಿಕಲಾ ಡಿ.ಪಿ. ಉಪಸ್ಥಿತರಿದ್ದರು.