Advertisement

Sullia: ಚಾಲಕನ ನಿಯಂತ್ರಣ ತಪ್ಪಿದ ಕಾರು

10:04 PM May 22, 2024 | Team Udayavani |

ಸುಳ್ಯ: ಸುಳ್ಯ ಹಳೆಗೇಟು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡದ ಮೇಲೆ ಹತ್ತಿ ಹೊರಬಂದು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ವಾಹನಕ್ಕೆ ಢಿಕ್ಕಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

Advertisement

ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಹಳೆಗೇಟು ಪೆಟ್ರೋಲ್‌ ಬಂಕ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ಗುಡ್ಡಕ್ಕೆ ಹತ್ತಿ ಅಲ್ಲಿಂದ ಹೊರ ಬಂದು ಮನೆಯ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೊ ವಾಹನಕ್ಕೆ ಢಿಕ್ಕಿಯಾಗಿದೆ. ಘಟನೆಯಿಂದ ಎರಡು ವಾಹನಗಳು ಜಖಂ ಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಾರೀಸುದಾರರಿಲ್ಲದೆ ಅನಾಥವಾದ ಶವದ ದಫನ
ಸುಳ್ಯ: ವಾರದ ಹಿಂದೆ ಸುಳ್ಯದ ಅರಂಬೂರು ಬಳಿ ಅನಾಥವಾಗಿ ಸಿಕ್ಕಿದ್ದ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ವಾರಸುದಾರರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್‌ ಇಲಾಖೆ ಹಾಗೂ ನಗರ ಪಂಚಾಯತ್‌ ಜಂಟಿಯಾಗಿ ಸುಳ್ಯದ ಕೇರ್ಪಳ ಹಿಂದೂ ರುದ್ರಭೂಮಿಯಲ್ಲಿ ದಫನ ಕಾರ್ಯ ನಿರ್ವಹಿಸಿತು.

ಪ್ರಗತಿ ಆಂಬುಲೆನ್ಸ್ ನ ಮಾಲಕ ಅಚ್ಚು ಪ್ರಗತಿಯವರು ದಫನ ಕಾರ್ಯದಲ್ಲಿ ತೊಡಗಿಕೊಂಡರು. ಕಳೆದ
ಮೃತದೇಹವನ್ನು ಒಂದು ವಾರದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದ್ದು, ಸಂಬಂಧಿಕರು ಯಾರಾದರೂ ಇದ್ದರೆ ಮೃತದೇಹವನ್ನು ಪಡೆದುಕೊಂಡು ಹೋಗುವಂತೆ ಸುಳ್ಯ ಪೊಲೀಸ್‌ ಠಾಣೆಯಿಂದ ಪತ್ರಿಕಾ ಪ್ರಕಟನೆ ನೀಡಲಾಗಿತ್ತು. ಘಟನೆ ನಡೆದು ವಾರವಾದರೂ ಮನೆಯವರು ಯಾರೂ ಬಾರದ ಹಿನ್ನೆಲೆಯಲ್ಲಿ ಮಂಗಳವಾರ ದಫನ ಮಾಡಲಾಗಿದೆ. ಈ ವೇಳೆ ಸ್ಥಳೀಯ ಪಂಚಾಯತ್‌ ಸಿಬಂದಿ, ಸುಳ್ಯ ಪೊಲೀಸ್‌ ಠಾಣೆಯ ಅನು ಕುಮಾರ್‌, ಮಹಿಳಾ ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next