Advertisement
ಮೊತ್ತ ನಿಗದಿಪಡಿಸಿಕ್ರಿಯಾಯೋಜನೆ ಸಭೆಗೆ ಮುಂಚಿತಾಗಿ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿ ಅದಕ್ಕೆ ಅರ್ಹವಾದ ಮೊತ್ತ ನಿಗದಿಪಡಿಸಬೇಕು. ಕಾಮಗಾರಿಗಳಿಗೆ ಅಗತ್ಯ ಅನುದಾನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅಭಿಯಂತರರನ್ನು ಸಭೆಗೆ ಕರೆಸಬೇಕು. ಎಲ್ಲ ಸದಸ್ಯರನ್ನೊಳಗೊಂಡ ಕ್ರಿಯಾಯೋಜನೆಯ ಪೂರ್ವಭಾವಿ ಸಭೆ ನಡೆಸಿ ಬಳಿಕ ಕ್ರಿಯಾಯೋಜನೆ ತಯಾರಿಸುವುದು ಸೂಕ್ತ ಎಂದು ಸದಸ್ಯ ಸಂತೋಷ್ ಜಾಕೆ ಪ್ರಸ್ತಾವಿಸಿದಾಗ ಸದಸ್ಯರೆಲ್ಲರೂ ಧ್ವನಿಗೂಡಿಸಿದರು.
ಎಪಿಎಂಸಿ ಯಾರ್ಡ್‌ನ ಸರ್ವೆ ವೇಳೆ 5 ಸೆಂಟ್ಸ್ ಜಾಗ ಒತ್ತುವರಿಯಾಗಿರುವುದನ್ನು ಅಧ್ಯಕ್ಷರು ಸದಸ್ಯರ ಗಮನಕ್ಕೆ ತಂದರು. ಈ ಬಗ್ಗೆ ಸುದೀರ್ಘ ಚರ್ಚಿಸಲಾಯಿತು. ಸದಸ್ಯ ವಿನಯ್ ಮುಳುಗಾಡು ಜಂಟಿ ಸರ್ವೆ ನಡೆಸಿ ಬಳಿಕ ಸಂಸ್ಥೆಯ ಆವರಣಕ್ಕೆ ಕಾಂಪೌಂಡ್ ಅಥವಾ ಬೇಲಿ ಅಳವಡಿಸುವಂತೆ ಸಲಹೆ ನೀಡಿದರು. ಕಸವಿಲೇಗೆ ಅವಕಾಶವಿಲ್ಲ
ಯಾರ್ಡ್‌ನ ಆವರಣದ ಖಾಲಿ ಜಾಗದಲ್ಲಿ ನಗರದ ಕಸ ಮತ್ತು ಮಣ್ಣು ತಂದು ಸುರಿಯದಂತೆ ನಿರ್ಧರಿಸಲಾಯಿತು. ಯಾರ್ಡ್‌ನ ಒಂದು ಭಾಗದ ಆಳ ಜಾಗಕ್ಕೆ ಅಗತ್ಯ ಮಣ್ಣುತುಂಬಿ ಸಮತಟ್ಟು ಗೊಳಿಸಬೇಕಾದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯ ಹೊಸ ಮಣ್ಣನ್ನು ಬಳಕೆ ಮಾಡುವಂತೆ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು.
Related Articles
43 ಲಕ್ಷ ರೂ. ವೆಚ್ಚದ ಗೋಡೌನ್ ಮತ್ತು ಸಿಸಿ ರಸ್ತೆ ಕಾಮಗಾರಿಯ ಟೆಂಡರ್ ನಡೆದಿದ್ದರೂ ಕಾಮಗಾರಿಗೆ ಒಪ್ಪಿಗೆ ದೊರೆಯದೇ ಬಾಕಿ ಉಳಿದಿದೆ. ಶೀಘ್ರ ಚಾಲನೆಗೆ ಅಧಿಕಾರಿಗಳಗೆ ಒತ್ತಡ ಹಾಕಲು, ಪ್ಲಾಸ್ಟಿಕ್ ಬಳಕೆ ನಿಷೇಧ ಸಮರ್ಪಕವಾಗಿ ಜಾರಿತರಲು ನಿರ್ಧರಿಸಲಾಯಿತು.
Advertisement
ಕಳಪೆ ಕಾಮಗಾರಿ ಬಗ್ಗೆ ಮಾಹಿತಿ:ಅತಿಥಿಗೃಹ ಕಾಮಗಾರಿ ಬಗ್ಗೆ ಸದಸ್ಯ ಬಾಲಕೃಷ್ಣ , ಸಂತೋಷ್ ಜಾಕೆ, ಅದಂ ಹಾಜಿ ಮಾಹಿತಿ ಬಯಸಿದಾಗ ಅಧಿಕಾರಿಗಳು
ಮಾಹಿತಿ ನೀಡಿದರು. ಕಳಪೆ ಕಾಮಗಾರಿ ಸಂಬಂಧಿಸಿದ ಚರ್ಚೆ ವೇಳೆ ಹೊಸ ಟೈಲ್ಸ್ ಖರೀದಿಗಾಗಿ ಗುತ್ತಿಗೆದಾರರು ಅಧ್ಯಕ್ಷರನ್ನು ಕರೆದುಕೊಂಡು ಹೋಗುವ ನಿರ್ಧಾರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನು ಆಕ್ಷೇಪಿಸಿದ ದೀಪಕ್ ಕುತ್ತಮೊಟ್ಟೆ ಈ ನಿರ್ಧಾರ ಸರಿಯಲ್ಲ. ಇದು ಅಧ್ಯಕ್ಷರ ಬಗೆಗಿನ ಅವಗಣನೆಯಾಗುತ್ತದೆ ಎಂದರು. ಎಪಿಎಂಸಿ ಅಧಿಕಾರಿಗಳು ಕಾರ್ಯ ನಿಮಿತ್ತ ಕ್ಷೇತ್ರಕ್ಕೆ ತೆರಳುವಾಗ ತನ್ನ ಗಮನಕ್ಕೆ ತರುವಂತೆ ಅಧ್ಯಕ್ಷರು ಸೂಚಿಸಿದರು. ಅತಿಥಿಗೃಹ ಶುಲ್ಕ ಏರಿಕೆ, ಆರ್‌ಟಿಒ ಚಾಲನಾ ತರಬೇತಿಗೆ ಶುಲ್ಕ ವಿಧಿಸುವ ಬಗ್ಗೆ , ಯಾರ್ಡ್ ಗೆ ವಲುಗಾರನ ನೇಮಕ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಸುಕನ್ಯಾ ಭಟ್, ಕಾರ್ಯದರ್ಶಿ ವಿಮಲಾ, ಸದಸ್ಯರು ಉಪಸ್ಥಿತರಿದ್ದರು. ಮಾರುಕಟ್ಟೆ ಸಪ್ತಾಹ: ಅಸಮಾಧಾನ
ಆಚರಣೆಯ ಆಮಂತ್ರಣ ಸರಿಯಾಗಿ ತಲುಪಿಸಿಲ್ಲ. ರೈತರಿಗೂ ಮಾಹಿತಿಯಿಲ್ಲ. ಹಿಂದಿನ ದಿನವಷ್ಟೇ ನೀಡಲಾಗಿದೆ. ಕಾಟಾಚಾರಕ್ಕಷ್ಟೇ ಮಾಡುವುದಲ್ಲ. ಕನಿಷ್ಠ ಮಾಧ್ಯಮ ಪ್ರಕಟನೆ ನೀಡಬಹುದಿತ್ತು ಎಂದು ಗಣೇಶ್ ಭಟ್ ಇಡ್ಯಡ್ಕ, ವಿನಯ ಕುಮಾರ್ ಮುಳುಗಾಡು, ಅದಂ ಹಾಜಿ ಮತ್ತಿತರರು ಪ್ರಸ್ತಾಪಿಸಿದರು. ಸದಸ್ಯ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮ ಮಾಹಿತಿ ರೈತರಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು ಎಂದರೆ, ದಿನದ ಹಿಂದಷ್ಟೇ ತಿಳಿಸಿ ತಲಾ 5 ಮಂದಿಯನ್ನು ಕರೆತರುವಂತೆ ಮಾಹಿತಿ ನೀಡಲಾಗಿದೆ. ಹೀಗಾದರೆ ರೈತರನ್ನಲ್ಲ ಮನೆ ಮಂದಿಯನ್ನಷ್ಟೇ ಕರೆತರಬೇಕು ಎಂದು ಸದಸ್ಯ ಬಾಲಕೃಷ್ಣ ಹೇಳಿದರು. ಸಪ್ತಾಹಕ್ಕೆ ರೈತರು ಆಗಮಿಸುವಂತೆ ಪೂರ್ವನಿಯೋಜಿತವಾಗಿ ಕರೆಯಬೇಕು ಎಂದು ಸದಸ್ಯ ಪುರುಷೋತ್ತಮ ನಂಗಾರು ಹೇಳಿದರು. ಕಾರ್ಯಕ್ರಮ ಮಾತ್ರವಲ್ಲ ಎಪಿಎಂಸಿ ಕಚೇರಿಯಿಂದ ಒಂದೇ ಒಂದು ಸುತ್ತೋಲೆಗಳು ಬರುತ್ತಿಲ್ಲ ಎಂದು ಸದಸ್ಯ ಮೋನಪ್ಪ ಪಂಜ ದೂರಿದರು.