Advertisement
ಪೆರುವಾಜೆ ನಿವಾಸಿ ಅಮರನಾಥ ಶೆಟ್ಟಿ ದೂರು ನೀಡಿದವರು. ಪೆರುವಾಜೆ ಗ್ರಾಮದಲ್ಲಿರುವ ಅಮರನಾಥ ಶೆಟ್ಟಿ ಅವರ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಇತ್ಯಾದಿ ಎಲೆಕ್ಟ್ರಿಕ್ ಸೊತ್ತುಗಳು, ಕಟ್ಟಡದ ಒಳಗೆ 4 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಹಾಗೂ ಪಾತ್ರೆ ಸಾಮಗ್ರಿಗಳನ್ನು, ನ. 1ರಿಂದ 3ರ ನಡುವೆ ಆರೋಪಿಗಳಾದ ಹರೀಶ್, ರೇಷ್ಮಾ, ಕಿರಣ, ಕಿಶೋರ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದವರು ದೂರು ನೀಡಿದ್ದಾರೆ. ಬೆಳ್ಳಾರೆ ರಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಳ್ಯ: ತನಗೆ 20 ಕೆಜಿ ಕೋಳಿ ಮಾಂಸ ಬೇಕೆಂದು ಫೋನ್ ಮಾಡಿ ಹೇಳಿದ ಅನಾಮಿಕನೊಬ್ಬ ಮಾಂಸ ಕೊಂಡೊಯ್ಯದೆ, ಪುಸಲಾಯಿಸಿ ಅಂಗಡಿ ಮಾಲಕನ ಬ್ಯಾಂಕ್ ಖಾತೆಯಿಂದಲೇ 7200 ರೂ. ಪಡೆದಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಬಾಳೆಮಕ್ಕಿಯಲ್ಲಿರುವ ಚಿಕನ್ ಸ್ಟಾಲ್ ಗೆ ಕರೆ ಮಾಡಿ ನಾಳೆ ಬೆಳಿಗ್ಗೆ 20 ಕೆಜಿ ಕೋಳಿ ಮಾಂಸ ಬೇಕು ಕಟ್ಟಿಡಿ, ನಾನು ಈಗ ಬರುತ್ತೇನೆ ಎಂದು ಹೇಳಿದ್ದು, ಅಂಗಡಿಯವರು ಮರುದಿನ ಬೆಳಿಗ್ಗೆ 20 ಕೆಜಿ ಕೋಳಿ ಮಾಂಸ ಸಿದ್ಧಗೊಳಿಸಿ ಹಿಂದಿನ ದಿನ ಕರೆ ಮಾಡಿದ ವ್ಯಕ್ತಿಗೆ ಕರೆ ಮಾಡಿ ಮಾಂಸದ ದರದ ವಿವರಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ. ಮಾಂಸಕ್ಕೆ ಆರ್ಡರ್‌ಕೊಟ್ಟ ಹಿಂದಿ ಮಾತನಾಡುವ ವ್ಯಕ್ತಿ ನಾನು ಗೂಗಲ್ ಪೇ ಮಾಡುತ್ತೇನೆ, ನೀವು ನನಗೆ 1 ರೂ. ಕಳುಹಿಸಿ ಎಂದು ಹೇಳಿದ್ದು, ಬಳಿಕ ಹೀಗೈ 5ರೂ, 10 ರೂ, 20 ರೂ. ಅತ್ತ ಇತ್ತ ಕಳುಹಿಸಿಕೊಂಡ ಮೇಲೆ, ನನಗೆ ಈಗ 7200 ರೂ. ಕಳುಹಿಸಿ ನಿಮಗೆ 14000 ರೂ. ಕಳುಹಿಸುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ.
Related Articles
Advertisement