Advertisement

Sullia: ಆತ್ಮಹ*ತ್ಯೆಗೆ ಯತ್ನಿಸಿದ್ದ ಯುವಕ ಸಾವು

08:58 PM Nov 12, 2024 | Team Udayavani |

ಸುಳ್ಯ: ವ್ಯಾಪಾರ ವ್ಯವಹಾರದಲ್ಲಿ ವಂಚನೆಗೊಳಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟ ಘಟನೆ ನಡೆದಿದೆ.

Advertisement

ಸುಳ್ಯದ ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಅಕೌಂಟ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು ಕೊಣಾಜೆ ಸಮೀಪದ ಯುವಕ ಅಭಿಲಾಷ್‌ ಕಂಬ್ಲಿಪದವು (30) ಮೃತರು. ಮೃತರು ತಂದೆ, ತಾಯಿ, ಪತ್ನಿ, ಸಹೋದರಿಯನ್ನು ಅಗಲಿದ್ದಾರೆ.

ಅಭಿಲಾಷ್‌ ನ. 5ರಂದು ಮಂಗಳೂರಿನಲ್ಲಿರುವ ತನ್ನ ಮನೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಕಲ್ಲಡ್ಕದಲ್ಲಿರುವ ಅಂಗಡಿಯೊಂದರಿಂದ ರ್ಯಾಟೋಲ್‌ ಖರೀದಿಸಿ ವಿಟ್ಲದ ಹೊಟೇಲ್‌ವೊಂದರಲ್ಲಿ ಸೇವಿಸಿದ್ದರು. ಸ್ಲೋ ಪಾಯಸನ್‌ ಸೇವಿಸಿದ್ದರಿಂದ ವೈದ್ಯರು ಪರೀಕ್ಷೆ ನಡೆಸಿ ವಿಷ ಪದಾರ್ಥವನ್ನು ಶರೀರದಿಂದ ಹೊರತೆಗೆಯುವ ಚಿಕಿತ್ಸಾ ಕ್ರಮವನ್ನು ಕೈಗೊಂಡಿದ್ದರು. ಆದರೆ ಅವರು ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಭಿಲಾಷ್‌ ಕೆಲವು ವರ್ಷಗಳ ಹಿಂದೆ ಸುಳ್ಯದಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದನ್ನು ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next