Advertisement

Sullia; ಪತ್ನಿ, ಮಗನೊಂದಿಗೆ ಉಮ್ಲಿಂಗ್‌ ಲಾ ತಲುಪಿದ ಉದ್ಯಮಿ

11:55 PM Sep 08, 2023 | Team Udayavani |

ಸುಳ್ಯ: ಸುಳ್ಯದ ಉದ್ಯಮಿ ಯೊಬ್ಬರು ಬುಲೆಟ್‌ ಬೈಕ್‌ನಲ್ಲಿ ಪತ್ನಿ, ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್‌ ಪ್ರದೇಶ (19,024 ಅಡಿ ಎತ್ತರ) ತಲುಪಿದ್ದಾರೆ.

Advertisement

ಸುಳ್ಯದ ಹಳೆಗೇಟಿನ ತೌಹೀದ್‌ ರೆಹ್ಮಾನ್‌ ಅವರು ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್‌ ರೆಹ್ಮಾನ್‌ ಅವರು ಬುಲೆಟ್‌ನಲ್ಲಿ ಉಮ್ಮಿಂಗ್‌ ಲಾ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ (17,498)ಗಿಂತ ಎತ್ತರದ ಮತ್ತು ಆಮ್ಲಜನಕದ ಮಟ್ಟವು 50 ಶೇ. ಕ್ಕಿಂತ ಕಡಿಮೆ ಇರುವ ಈ ಸ್ಥಳಕ್ಕೆ ರೆಹ್ಮಾನ್‌ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. ಇಂಡಿಯಾ ರೆಕಾರ್ಡ್‌ ಬುಕ್‌ನಲ್ಲಿ ಈ ದಾಖಲೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಲಡಾಕ್‌ನ ಚೀನದ ಗಡಿಯಲ್ಲಿರುವ ಉಮ್ಲಿಂಗ್‌ ಲಾ ವಿಶ್ವದ ಅತೀ ಎತ್ತರದ ಮೋಟಾರು ರಸ್ತೆಯಾಗಿದೆ. ಇದರ ಎತ್ತರವು ಸರಿಸುಮಾರು 19,024 ಅಡಿ ಆಗಿದ್ದು, ಇದು 52 ಕಿ.ಮೀ. ರಸ್ತೆಯಾಗಿದ್ದು, ಚಿಶುಮ್ಮೆಯನ್ನು ಡೆಮ್‌ಚೋಕ್‌ಗೆ ಸಂಪರ್ಕಿಸುತ್ತದೆ. ಇದು ಗಡಿ ನಿಯಂತ್ರಣ ರೇಖೆಯಲ್ಲಿದೆ. (ಎಲ್‌ಎಸಿ) ಭಾರತ ಮತ್ತು ಚೀನ ನಡುವಿನ ಘರ್ಷಣೆಯ ಬಿಂದುವಾಗಿದೆ.

ರೆಹ್ಮಾನ್‌ ಅವರು ಈ ಹಿಂದೆ ಕಾರಿನಲ್ಲಿ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶ, ಶ್ರೀನಗರ ಸುತ್ತಿದ್ದರು. ಲಡಾಕ್‌ಗೆ ಆರು ಬಾರಿ ಉಮ್ಮಿಂಗ್‌ ಲಾಕ್ಕೆ ಮೊದಲ ಬಾರಿ ಬೈಕ್‌ನಲ್ಲಿ ಸಾಹಸ ಯಾತ್ರೆ ಕೈಗೊಂಡಿದ್ದರು. ಆ.15ರಂದು ಸುಳ್ಯದಿಂದ ಹೊರಟಿದ್ದ ರೆಹ್ಮಾನ್‌ 19 ದಿನಗಳಲ್ಲಿ ಉಮ್ಮಿಂಗ್‌ ಲಾ ತಲುಪಿದ್ದಾರೆ. ಅಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ, ತುಳುನಾಡಿನ ಬಾವುಟವನ್ನು ಹಾರಿಸಿದ್ದಾರೆ. 5 ಸಾವಿರ ಕಿ.ಮೀ. ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಉಮ್ಮಿಂಗ್‌ ಲಾ ತಲುಪಿದ ತತ್‌ಕ್ಷಣ ಆರ್ಮಿ ಅಧಿಕಾರಿಗಳು ತಮ್ಮನ್ನು ಸ್ವಾಗತಿಸಿದರು. ಮತ್ತು ತಮ್ಮ ಸಾಹಸದ ಬಗ್ಗೆ ಅವರು ಅಭಿನಂದಿಸಿದರು ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಬೈಕ್‌ನಲ್ಲಿ 9 ವರ್ಷದ ಬಾಲಕನೊಂದಿಗೆ ಕೋಲ್ಕತಾದ ದಂಪತಿ ಉಮ್ಮಿಂಗ್‌ ಲಾ ತಲುಪಿದ್ದರು. ಇದು ದಾಖಲೆಯಾಗಿತ್ತು. ಈ ದಾಖಲೆಯನ್ನು ರೆಹ್ಮಾನ್‌ ದಂಪತಿ ಮೂರು ವರ್ಷದ ಬಾಲಕನೊಂದಿಗೆ ತೆರಳಿ ದಾಖಲೆ ಮುರಿದಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next