Advertisement
ಸಭಾಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ಮಾತನಾಡಿ, ಡಿ. 9ರಂದು ತೊಡಿಕಾನದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು. ಸುಗಮ ಸಂಗೀತ ಕ್ಷೇತ್ರದ ಸಾಧಕ ಕೆ.ಆರ್. ಗೋಪಾಲಕೃಷ್ಣ, ನೃತ್ಯ ಸಂಗೀತ ಕ್ಷೇತ್ರದ ಸಾಧಕಿ ವಿದ್ಯಾಶ್ರೀ ರಾಧಾಕೃಷ್ಣ, ಜಾನಪದ ಕ್ಷೇತ್ರದ ಸಾಧಕ ರಮೇಶ್ ಮೆಟ್ಟಿನಡ್ಕ ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಗಿರಿಜಾ ಎಂ.ವಿ., ತಾಲೂಕು ಕಸಾಪ ಕಾರ್ಯದರ್ಶಿ ತೇಜಸ್ವಿ ಕಡಪಾಲ ಉಪಸ್ಥಿತರಿದ್ದರು. ಗಿರಿಜಾ ನಾಯಕ್ ಪ್ರಾರ್ಥಿಸಿದರು. ಸುವಿಚಾರ ಸಾಹಿತ್ಯ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ಉಷಾ ಪೇರಾಲು ವಂದಿಸಿದರು. ವಸಂತ ಏನೆಕಲ್ಲು ನಿರೂಪಿಸಿದರು.
ಆಂಗ್ಲಭಾಷೆಯ ಮೇಲೆ ಅತಿಯಾದ ವ್ಯಾಮೋಹ ಸಲ್ಲದು. ಇಂತಹ ಮನಸ್ಥಿತಿಯಿಂದ ಹೆತ್ತವರು ಹೊರ ಬಂದು, ಕನ್ನಡ ಭಾಷೆಯಂತಹ ಮಾತೃಭಾಷೆಗೆ ಮಕ್ಕಳು ಮನಸ್ಸು ನೀಡಲು ಪ್ರೇರಕ ಶಕ್ತಿಯಾಗಬೇಕು. ಸುವಿಚಾರದಂತಹ ಸಾಹಿತ್ಯ ವೇದಿಕೆಗಳ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕೆ.ಆರ್. ಗೋಪಾಲಕೃಷ್ಣ, ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ರಮೇಶ್ ಮೆಟ್ಟಿನಡ್ಕ ಅವರನ್ನು ಸಮ್ಮಾನಿಸಲಾಯಿತು.