Advertisement

ISRO: ಚಂದ್ರನಲ್ಲಿದೆ ಗಂಧಕ, ಆಮ್ಲಜನಕ: ಇಸ್ರೋ ರೋವರ್‌ನಿಂದ ಹೊಸ ಮಾಹಿತಿ

12:20 AM Aug 30, 2023 | Team Udayavani |

ಬೆಂಗಳೂರು: ಚಂದ್ರನ ದಕ್ಷಿಣ ಭಾಗದಲ್ಲಿ ಗಂಧಕದ ಅಂಶ ಇರುವುದನ್ನು ಪ್ರಗ್ಯಾನ್‌ ರೋವರ್‌ ಪತ್ತೆ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಅದು ಚಂದ್ರನ ಮೇಲ್ಮೆ„ ಮತ್ತು ಕೆಲವೇ ಸೆಂಟಿಮೀಟರ್‌ ಆಳದಲ್ಲಿ ಅಗಾಧ ತಾಪಮಾನ ವ್ಯತ್ಯಾಸ ಇದೆ ಎಂಬ ಅಂಶವನ್ನು ಪತ್ತೆ ಹಚ್ಚಿ ಹೊಸ ಇತಿಹಾಸ ಸೃಷ್ಟಿಸಿತ್ತು.

Advertisement

ಗಂಧಕ ಅಂಶ ಪತ್ತೆಯಾಗಿ ರುವ ಬಗ್ಗೆ ಟ್ವೀಟ್‌ ಮಾಡಿರುವ ಇಸ್ರೋ, ಚಂದ್ರನಲ್ಲಿ ಸಿಕ್ಕಿರುವ ಮಾಹಿತಿಯನ್ನು ಪ್ರಾಥಮಿಕವಾಗಿ ಅಧ್ಯಯನ ನಡೆಸಿದ ಬಳಿಕ ಅಲ್ಲಿ ಅಲ್ಯುಮಿನಿಯಂ, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್‌ ಇರುವ ಬಗ್ಗೆಯೂ ದೃಢಪಟ್ಟಿದೆ. ಅಲ್ಲಿ ನೀರು ಯಾವ ಪ್ರಮಾಣ ದಲ್ಲಿ ಇದೆ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದಿದೆ.

ಪ್ರಗ್ಯಾನ್‌ ರೋವರ್‌ನಲ್ಲಿರುವ ಲೇಸರ್‌ – ಇಂಡ್ನೂಸ್ಡ್ ಬ್ರೇಕ್‌ಡೌನ್‌ ಸ್ಪೆಕ್ಟ್ರೋಸ್ಕೋಪ್‌ (ಎಲ್‌ಐಬಿಎಸ್‌) ಉಪಕರಣದ ಮೂಲಕ ಮೊದಲ ಬಾರಿಗೆ ಈ ಬಗ್ಗೆ ಖಚಿತಪಡಿಸಿದೆ.

ಆಮ್ಲಜನಕವೂ ಇದೆ

ಚಂದ್ರನಲ್ಲಿ ಆಮ್ಲಜನಕದ ಅಂಶ ಇರುವುದನ್ನು ಕೂಡ ಎಲ್‌ಐಬಿಎಸ್‌ ದೃಢಪಡಿಸಿದೆ ಎಂದು ಇಸ್ರೋ ಹೇಳಿದೆ. ವಿಶೇಷ ವಾಗಿ ಅಭಿವೃದ್ಧಿಪಡಿಸಲಾಗಿರುವ ಲೇಸರ್‌ ಕಿರಣಗಳ ಮೂಲಕ ಚಂದ್ರನ ದಕ್ಷಿಣ ಭಾಗದ ಮೇಲ್ಮೆ„ ಪ್ರದೇಶವನ್ನು ಸಮಗ್ರವಾಗಿ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next