ಬಾಗಲಕೋಟೆ: ಉತ್ತರ ಕರ್ನಾಟಕದ ಸುಪ್ರಸಿದ್ಧ, ನಿರಂತರ ಒಂದು ತಿಂಗಳ ಕಾಲ ನಡೆಯುವ ಬಾದಾಮಿಯ ಸುಕ್ಷೇತ್ರ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ 2023 ನೇ ಸಾಲಿನ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಡಿ.30 ರಿಂದ ಆರಂಭವಾಗಿ ಜ.15 ರ ವರೆಗೆ ನಡೆಯಲಿವೆ.
ಡಿ.30 ರಂದು ಶುಕ್ರವಾರ ಘಟಸ್ಥಾಪನೆ,ಧ್ವಜಾರೋಹಣ, ಡಿ.31 ಶನಿವಾರ ದಿಂದ ಜ.4 ರ ಬುಧವಾರದವರೆಗೆ ಹೋಮ ಹವನಾದಿಗಳು, ವಾಹನೋತ್ಸವ ಮತ್ತು ಅಷ್ಟಾವಧಾನ, ಜ.5 ಗುರುವಾರ ಪಲ್ಲೇದ ಹಬ್ಬ, ಜ.6 ರಂದು ಶುಕ್ರವಾರ ಸಂಜೆ 5 ಗಂಟೆಗೆ ಮಹಾರಥೋತ್ಸವ, ಜ.10 ರಂದು ಮಂಗಳವಾರ ಕಳಸ ಇಳಿಯುವುದು, ಜ.15 ರಂದು ರವಿವಾರ ಮಕರ ಸಂಕ್ರಮಣ ಈ ರೀತಿಯಾಗಿ ಕಾರ್ಯಕ್ರಮಗಳು ಈ ವರ್ಷ ವಿಜೃಂಭನೆಯಿಂದ ಜರುಗಲಿವೆ ಎಂದು ಶ್ರೀ ಬನಶಂಕರಿದೇವಸ್ಥಾನ ಟ್ರಸ್ಟ್ ಕಮಿಟಿ ಚೇರಮನ್ ಎಂ.ಎಸ್.ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.