ನವದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದು, ಜೈಲು ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಎಂದು ಆಗಾಗ ಆರೋಪಿಸುತ್ತಿರುವ ಬಂಧಿತ ಸುಕೇಶ್ ಚಂದ್ರಶೇಖರ್, ಈಗ ಅಧಿಕಾರಿಗಳ ವಿರುದ್ಧ ಮತ್ತೊಂದು ಅರ್ಜಿ ಸಲ್ಲಿಸಿದ್ದು, ತನ್ನನ್ನು ಬಲವಂತವಾಗಿ ಲೈಂಗಿಕ ಅಲ್ಪಸಂಖ್ಯಾತರ ಸೆಲ್‌ನಲ್ಲಿ ಇರಿಸಲಾಗಿದೆ, ನನಗೆ ಲೂಡೋ ಆಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾನೆ.
ದೆಹಲಿಯ ಪಟಿಯಾಲಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸುಕೇಶ್, ನನ್ನನ್ನು ಅಕ್ರಮವಾಗಿ ಲೈಂಗಿಕ ಅಲ್ಪಸಂಖ್ಯಾತರ ಸೆಲ್‌ಗೆ ಅಧಿಕಾರಿಗಳು ವರ್ಗಾಯಿಸಿದ್ದಾರೆ.
ಇಲ್ಲಿ ನನಗೆ ಜೀವ ಬೆದರಿಕೆ ಇರುವ ಕಾರಣ ನನ್ನನ್ನು ಮತ್ತೆ ಸೆಲ್ 14ಕ್ಕೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದ್ದಾನೆ.
ಜತೆಗೆ ಜೈಲಿನಲ್ಲಿ ತಾರತಮ್ಯ ಎಸಗುತ್ತಿದ್ದು, ನನಗೆ ಲೂಡೋ-ಬ್ಯಾಡ್ಮಿಂಟನ್ ಆಡಲು ಕೂಡ ಅಧಿಕಾರಿಗಳು ಅನುಮತಿಸುತ್ತಿಲ್ಲ ಎಂದಿದ್ದಾನೆ.