ನವದೆಹಲಿ: ಈ ಹಿಂದೆ 215 ಕೋಟಿ ರೂ.ಗಳ ವಸೂಲಿ ಪ್ರಕರಣದಲ್ಲಿ ಬಂಧಿತನಾಗಿದ್ದ ಸುಕೇಶ್ ಚಂದ್ರಶೇಖರ್‌ನನ್ನು ಈಗ 5 ವರ್ಷಗಳ ಹಿಂದಿನ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಬಂಧಿಸಿದೆ.
ತಮಿಳುನಾಡಿನ ರಾಜಕಾರಣಿ ಟಿಟಿವಿ ದಿನಕರನ್‌ಗೆ ವಂಚಿಸಿದ ಪ್ರಕರಣ ಇದಾಗಿದೆ. 2016ರಲ್ಲಿ ಎಐಎಡಿಎಂಕೆ ಪಕ್ಷ ಇಬ್ಭಾಗವಾದ ಬಳಿಕ ಪಳನಿಸ್ವಾಮಿ ಬಣ ಮತ್ತು ದಿನಕರನ್ ಬಣದ ನಡುವೆ ಪಕ್ಷದ “ಎರಡು ಎಲೆ’ ಚಿಹ್ನೆಗಾಗಿ ಪೈಪೋಟಿ ನಡೆದಿತ್ತು.
ಈ ವೇಳೆ ಚುನಾವಣಾಧಿಕಾರಿಗಳಿಗೆ ಲಂಚ ನೀಡಿ ಎರಡೆಲೆ ಚಿಹ್ನೆ ನಿಮಗೇ ಸಿಗುವಂತೆ ಮಾಡಬೇಕೆಂದರೆ ನನಗೆ 50 ಕೋಟಿ ರೂ. ಪಾವತಿಸಬೇಕು ಎಂದು ದಿನಕರನ್‌ಗೆ ಸುಕೇಶ್ ಹೇಳಿದ್ದ. ಅದರಂತೆ ಅವನಿಗೆ 50 ಕೋಟಿ ರೂ. ನೀಡಲಾಗಿತ್ತಾದರೂ, ಚಿಹ್ನೆ ಮಾತ್ರ ದಿನಕರನ್‌ಗೆ ಸಿಕ್ಕಿರಲಿಲ್ಲ.
ಇದನ್ನೂ ಓದಿ:ಸಾಗರ ನಗರಸಭೆಯಲ್ಲಿ ಇವತ್ತಿಗೂ ಬಿಎಸ್‌ವೈಯೇ ಸಿಎಂ!
ಈ ಹಿನ್ನೆಲೆಯಲ್ಲಿ ಸುಕೇಶ್ ವಿರುದ್ಧ ವಂಚನೆ ದೂರು ದಾಖಲಿಸಲಾಗಿತ್ತು. ಈಗ ಪ್ರಕರಣ ಸಂಬಂಧ ಆತನನ್ನು ಇ.ಡಿ. ಬಂಧಿಸಿದೆ.